ಶ್ರೀ ವಿಷ್ಣು ಮಿತ್ರ ವೃಂದ (ರಿ.) ಪಾಲ್ತಾಡು ಇವರ ಆಶ್ರಯದಲ್ಲಿ ನಡೆಯುವ 13 ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮದ ಹಾಗೂ ಮುದ್ದು ಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ ಇಂದು (ಆ-26) ಪಾಲ್ತಾಡು ವಿಷ್ಣುನಗರದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಹರಿಕೃಷ್ಣ ಭಟ್ ಬರೆಮೇಲು ದೀಪ ಬೆಳಗಿಸಿ ಉದ್ಘಾಟಿಸಿದರು, ತದನಂತರ ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು, ಶ್ರೀ ದುರ್ಗಾ ಭಜನಾ ಸಂಘ ಪೆರುವಾಜೆ ಇವರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ ನಡೆಯಿತು. ನಂತರ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಸಂಜೆ ಸಮಯ 6 ಗಂಟೆಯ ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಿತು.
ಸಮಾರೂಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ದೇವಿಪ್ರಸಾದ್ ಕೆ {ಅಧ್ಯಕ್ಷರು, ಶ್ರೀವಿಷ್ಣು ಮಿತ್ರವೃಂದ (ರಿ.) ವಿಷ್ಣುನಗರ, ಪಾಲ್ತಾಡು} ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಸುಂದರಿ ಬಿ. ಎಸ್ {ಅಧ್ಯಕ್ಷರು, ಗ್ರಾಮ ಪಂಚಾಯತ್ ಸವಣೂರು}, ಶ್ರೀ ಪ್ರಮೋದ್ ಕೆ ಎಸ್ {ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಕೊಳ್ತಿಗೆ}, ಶ್ರೀ ದಾಮೋದರ ನಾಗನಮಜಲು {ಮಾಜಿ ಸದಸ್ಯರು, ವ್ಯವಸ್ಥಾಪನಾ ಸಮಿತಿ, ಶ್ರೀ ಜಲದುರ್ಗಾದೇವಿ ದೇವಸ್ಥಾನ ಪೆರುವಾಜೆ}, ಶ್ರೀ ಪುರಂದರ ಕಾಪಿನಮೂಲೆ {ಅಧ್ಯಕ್ಷರು, ಎಸ್.ಡಿ.ಎಂ.ಸಿ, ಸ.ಕಿ.ಪ್ರಾ.ಶಾಲೆ ಚೆನ್ನಾವರ}, ಶುಭಲತಾ ಜೆ ರೈ {ಸದಸ್ಯರು ಗ್ರಾಮ ಪಂಚಾಯತ್ ಕೊಳ್ತಿಗೆ} ನವೀನ್ ಕುಮಾರ್ {ಕಾರ್ಯದರ್ಶಿ ವಿಷ್ಣುಮಿತ್ರ ವೃಂದ ಪಾಲ್ತಾಡು} ಉಪಸ್ಥಿತರಿದ್ದರು.
ಸಮಾರೂಪ ಸಮಾರಂಭದ ನಂತರ ಶಾಲಾ ಮಕ್ಕಳಿಂದ ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನದ ಸಹಭೋಜನಕ್ಕೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪೂರ್ಣ ಸಹಕಾರ ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆ ಪಾಲ್ತಾಡು ಘಟಕ, ಹಾಲು ಉತ್ಪಾದಕರ ಸಹಕಾರಿ ಸಂಘ ಪಾಲ್ತಾಡು, ಗಜಾನನ ಸ್ವಸಹಾಯ ಸಂಘ ಕಾಪಿನಕಾಡು, ಅಮ್ಮನವ ಸೇವಾ ಸಮಿತಿ ಪಾಲ್ತಾಡು, ಸರ್ವ ಮಂಗಲ ಪ್ರಗತಿ ಬಂಧು ತಂಡ ಕಾಪಿನಮೂಲೆ, ಮಯೂರ ಪ್ರೆಂಡ್ಸ್ ಸರ್ಕಲ್ ಪಾಲ್ತಾಡು ಇವರು ಸಹಕರಿಸಿದರು.
0 ಕಾಮೆಂಟ್‌ಗಳು