ಕುಮಟದಲ್ಲಿ 1846 ನೇ ಮದ್ಯವರ್ಜನ ಶಿಬಿರ ಉದ್ಘಾಟನೆ

 

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿರೇಗುತ್ತಿ ವಲಯದ ಶ್ರೀ ಮಹಾಲಸ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನ ಮಾದನಗೇರಿಯಲ್ಲಿ 1846ನೇ ಮಧ್ಯವರ್ಜನ ಶಿಬಿರದ ಉದ್ಘಾಟನೆ ನಡೆಯಿತು.


ಕಾರ್ಯಕ್ರಮವನ್ನು ಶ್ರೀ ಸೂರಜ್ ನಾಯ್ಕ ಸೋನಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರು ಉದ್ಘಾಟಿಸಿದರು, ವೇದಿಕೆಯಲ್ಲಿ ಶ್ರೀ ಮಹೇಶ್ ಬಿ ನಾಯಕ್ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಉತ್ತರ ಕನ್ನಡ -2, ಶ್ರೀ ಮಹೇಶ್ ಎಂ ಡಿ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉತ್ತರ ಕನ್ನಡ ಶ್ರೀ ವಾಸುದೇವ್ ಎನ್ ನಾಯಕ್ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರು ಹಾಗೂ ಸಮಿತಿ ಅಧ್ಯಕ್ಷರು ಶ್ರೀ ನಾಗರಾಜ್ ನಾಯಕ್ ಗ್ರಾಮ ಪಂಚಾಯತ್ ಸದಸ್ಯರು ಬರ್ಗಿ ಉಪಸ್ಥಿತರಿದದರು.



ಶ್ರೀ ಗಣೇಶ್ ಆಚಾರ್ಯ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳು ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮತ್ತು ಶಿಬಿರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ ಕಲ್ಮೇಶ್ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಮಟಾ ತಾಲೂಕು, ಶ್ರೀ ಸತೀಶ್ ಶೆಟ್ ಮಾಜಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಉತ್ತರ ಕನ್ನಡ ಹಾಗೂ ಇನ್ನಿತರ ಗಣ್ಯ ಮಾನ್ಯರ ಉಪಸ್ಥಿತಿಯಲ್ಲಿ ಇಂದು ಮದ್ಯವರ್ಜನ ಶಿಬಿರಕ್ಕೆ ಚಾಲನೆ ದೊರೆಯಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು