ಪುತ್ತಿಲರದ್ದು ಎನ್ನಲಾದ ಆಡಿಯೋ ವೈರಲ್...!


ಪುತ್ತಿಲ ಪರಿವಾರದ  ನಾಯಕ  ಕರಾವಳಿಯ ಹಿಂದೂ ಪಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಅವರದ್ದು ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಮಹಿಳೆ ಮತ್ತು ಅರುಣ್ ಕುಮಾರ್ ಪುತ್ತಿಲ ನಡುವಿನ ಮಾತುಕತೆಗಳು,   ರಾಜಕೀಯದ ಕುರಿತು  ಹಲವು ವಿಚಾರಗಳನ್ನು ಚರ್ಚೆಮಾಡಿರುವ ಆಡೀಯೊ ವೈರಲ್ ಆಗಿದೆ. ಅತ್ಯಂತ ಆತ್ಮೀಯತೆಯಿಂದ ಮಾತನಾಡಿ ಅದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿಬಿಡಲಾಗಿದ್ದು ಇದರ ಹಿಂದಿನ ಉದ್ದೇಶವೇನು ಎಂಬುದು ತಿಳಿದು ಬಂದಿಲ್ಲ.


ಕರಾವಳಿಯಲ್ಲಿ ಪುತ್ತಿಲ ಅಂದರೆ ಹಿಂದುತ್ವ, ಹಿಂದುತ್ವ ಅಂದರೆ ಪುತ್ತಿಲ್ಲ ಎಂಬುದು ಯಾರಿಗೂ ತಿಳಿದಿರದ ವಿಷಯವಲ್ಲ. ಕಳೆದ ಬಾರಿ ಪುತ್ತೂರು ತಾಲೂಕಿನ ವಿಧಾನ ಸಭಾ ಚುಣಾವಣೆ ಸಂದರ್ಭದಲ್ಲಿ ಪುತ್ತಿಲರವರ ಹವಾ ಇಡೀ ರಾಜ್ಯದ್ಯಾಂತ ಪಸರಿಸಿತು. ಪುತ್ತಿಲ ಅಂದರೆ ಏನು ಎಂಬುದನ್ನು ಇಡೀ ರಾಷ್ಟ್ರಕ್ಕೆ ಪುತ್ತೂರು ತಾಲೂಕಿನಲ್ಲಿದ್ದೆ ತೋರಿಸಿಕೊಟ್ಟ ಹಿಂದೂ ಪಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ.


ಅಂತಹ ನಾಯಕನನ್ನು ಹೆಣೆಯಲು, ಅವರ ವರ್ಚಸನ್ನು ಕುಗ್ಗಿಸುವುದಕ್ಕೆ ಕಾಣದ ಕೈಗಳಿಂದ ಹುನ್ನಾರ ನಡೆಯುತ್ತಿವೆಯಾ? ಇದೀಗ ವೈರಲ್ ಆಗಿರುವ ವೀಡಿಯೋ ಅಸಲಿಯೋ? ನಕಲಿಯೊ ಎಂಬುದು ತಿಳಿದುಬರಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Sudarshan puttur ಹೇಳಿದ್ದಾರೆ…
Audio ನಿಜ ಇರಬಹುದು ಆದರೆ ಇದರಲ್ಲಿ ವಂಚನೆ ಬುದ್ದಿವಂತಿಕೆ ಇಲ್ಲ. ಪಕ್ಷದವರೆ ಇದನ್ನು ವೈರಲ್ ಮಾಡಿರಬಹುದು. ಅಧಿಕಾರ ತಪ್ಪಿಸಲು. ಪುತ್ತೂರಿನ ನಾಲ್ಕೈದು ಜನ ಇದರಲ್ಲಿ ಶಾಮಿಲು ಇರಬಹುದು