ನಾನೊಬ್ಬ ಕರಾವಳಿ ಜಿಲ್ಲೆಯ ಕುವರ, ನನ್ನ ಊರು ಸುಳ್ಯ ತಾಲೂಕಿನ ಬೆಳ್ಳಾರೆ ಕುಗ್ರಾಮದವ. ನಾನು ಬರಹಗಾರ, ಚಿಂತಕ, ವಿಶ್ಲೇಷಕ, ಸಾಹಿತಿ ಏನು ಅಲ್ಲ, ಇತ್ತೀಚಿಗೆ ನಡೆದ ಒಂದು ಘಟನೆಯಿಂದ ಬೇಸತ್ತು ನನ್ನ ಮನದೊಳಗಿನ ನೋವನ್ನು ಲೇಖನಿಯ ಮೂಲಕ ಗೀಚಿದ್ದೇನಷ್ಟೆ. ಇದು ಓದುರಿಗೊಂದು ಲೇಖನವಾಗಿ, ದುರಂತ ಕಥೆಯಾಗಿ, ನೊಂದ ಹೃಯಗಳಿಗೆ ಸಂತೈಸುವ ಬರಹವಾಗಿದೆ.
ಒಬ್ಬ ತಾಯಿ ತನ್ನ ಮಗಳು ಕೆಲಸ ಮುಗಿಸಿ ಮನೆಯತ್ತ ಹೊರಡುವಾಗ ಉದಯಿಸಿದ ಸೂರ್ಯ ಮುಳುಗುವ ಸಮಯ. ದಿನದ ಕಾಯಕದಲ್ಲಿ ಬಿಡುವು ಸಿಕ್ಕ ಕೂಡಲೆ ಹೊಟ್ಟೆಗೇನಾದರೂ ತಿನ್ನಲು ಮಾಡಕೊಡಬೇಂದು ತನ್ನ ಕೈಯಾರೆ ಅಡುಗೆ ತಯಾರಿಸಿ ಕಾದು ಕುಳಿತರೆ, ಅತ್ತ ತನ್ನ ಮಗಳು ಕಾಮ ಪಿಶಾಚಿಗಳ ಕೈಯಲ್ಲಿ ಸಿಕ್ಕಿ ತನ್ನ ಮಾನ, ಪ್ರಾಣ ಎರಡನ್ನು ಕಳೆದುಕೊಂಡಿರುತ್ತಾಳೆಂಬುದನ್ನು ಹೇಗೆ ಅರಗಿಸಿಕೊಳ್ಳಲಿ..!
ಪಾಪ ವೃತ್ತಿಯಲ್ಲಿ ಅವಳೊಬ್ಬ ವೈಧ್ಯೆಯಾಗಿದ್ದಳು. "ವೈದ್ಯೋ ನಾರಾಯಣೋ ಹರಿ" ವೈದ್ಯರೇ ದೇವರು ಈಕೆ ಕೂಡ ತನ್ನ ಕರ್ತವ್ಯದ ಸಮಯದಲ್ಲಿ ರೋಗಿಗಳನ್ನು ಆರೈಕೆ ಮಾಡುತ್ತಾ ತನ್ನ ಪಾಡಿಗೆ ತಾನು ಇದ್ದರು. ದಿನಾ ಪೂರ್ತಿ ದುಡಿದು ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಕೊಠಡಿಗೆ ತೆರಳಿದ ಆ ವೈಧ್ಯೆ ಮರಳಿ ಬಂದದ್ದು ಶವವಾಗಿ.
ಉಸಿರು ನಿಂತ ಮೇಲೆ ಹೆಣ ಅನ್ನುತ್ತಾರ...! ಹೌದು, ಆದರೆ ಈ ವೈಧ್ಯೆಯ ಶವ
ನೋಡಲಾಗದ ಸ್ಥಿತಿಯಲ್ಲಿತ್ತು. ಯಾರೂ ಊಹಿಸಲಾಗದ ಸ್ಥಿತಿಯಲ್ಲಿದ್ದ ಶವವನ್ನು ನೋಡಿ ಅವಳನ್ನು ಹೆತ್ತ ಕರುಳಿನ ನೋವು, ಆಕ್ರಂಧನ, ಕುಟುಂಬಸ್ಥರ ದುಃಖ ಕಟ್ಟೆ ಒಡೆದೊಯ್ತು. ಮಾತ್ರವಲ್ಲ ಇಡೀ ರಾಷ್ಟ್ರವೇ ದುಃಖದ ಕಡಲಿನಲ್ಲಿ ತೇಲಾಡುವಂತೆ ಮಾಡಿತು.
ಅಷ್ಟಕ್ಕೂ ಆಕೆಗೆ ಏನಾಯಿತು..!
ವಿಶ್ರಾಂತಿ ಪಡೆಯಲು ಹೋದ ಆಕೆಯನ್ನು ತಮ್ಮ ಕಾಮದಾಸೆ ತೀರಿಸಿಕೊಂಡು ಯಾರೊಬ್ಬರು ಊಹಿಸಲಾಗದ ರೀತಿಯಲ್ಲಿ ಕೃತ್ಯವೆಸಗಿ ಆಕೆಯ ಜೀವವನ್ನೇ ತಿಂದುಬಿಟ್ಟರು. ಕೇವಲ ಕಾಮುಕರು ಮಾತ್ರವಲ್ಲ ಅವರು ರಾಕ್ಷಸರು, ಹೆಣ್ಣೆಂದರೆ ತನ್ನ ತಾಯಿಯನ್ನು ಬಿಡದ ನಾಯಿ ಜನ್ಮದವರ ಕೈಗೆ ಸಿಕ್ಕ ವೈಧ್ಯೆ ಶವವಾಗಿ ಮಲಗಿ ಬಿಟ್ಟಳು.
ಈ ಘಟನೆ ಮಾಸುವ ಮೊದಲೇ ಇನ್ನೊಂದು, ಮತ್ತೊಂದು ಅಂತಹದ್ದೆ ಕರ್ಮಕಾಂಡ ಬೆಳಕಿಗೆ ಬಂದು ಬಿಡ್ತು. ಅಂಬೆ ಕಾಲಿಟ್ಟು ಇನ್ನೇನೊ ಸರಿಯಾಗಿ ಹೆಜ್ಜೆಯನಿಡುವ ಪುಟ್ಟ ಕಂದಮ್ಮಗಳನ್ನು ಬಿಡಲಿಲ್ಲ ಕಾಮುಕರು. ಛೀ
ಪುರುಷ ಜನ್ಮಕ್ಕೆ ನಾಚಿಕೆ. ಈ ಪ್ರಪಂಚದಲ್ಲಿ ಆಗೋಮ್ಮೆ ಈಗೊಮ್ಮೆಗಿಂತ ಕ್ಷಣ ಕ್ಷಣಕ್ಕೂ ಸುದ್ದಿಯಾಗುತ್ತಿರುವುದು ಅತ್ಯಾಚಾರವೆಂಬ ಕೆಟ್ಟ ವಾಸನೆ.
ಇತ್ತ ಒಬ್ಬ ತಂದೆ ತನ್ನ ಮಗಳಿಗಾಗಿ ಬೆವರೆಂಬ ರಕ್ತವನ್ನು ಸುರಿಸಿ ಕಷ್ಟ ಪಟ್ಟು ದುಡಿದು ಅವಳಿಗಾಗಿ ಓಡೋಡಿ ಮನೆಗೆ ಬಂದು ನೋಡಿದರೆ
ಹೊರಗಡೆ ತುಂಬಾ ಜನ, ಒಳಗಡೆ ತನ್ನ ಮಗಳು ಬಿಳಿ ಬಟ್ಟೆ ಹೊದ್ದು ಮತ್ತೆಂದಿಗೂ ಎದ್ದು ಬಾರದೆ ಅಂಗಾತ ಮಲಗಿದ್ದಾಳೆ. ಅಪ್ಪು ಮಗಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಕಣ್ಣೀರು ಸುರಿಸುತ್ತಾರೆ, ಪಾಪಿಗಳ ಕೈಯಲ್ಲಿ ಮಗಳ ಮಾನ ಪ್ರಾಣ ಎರಡು ಹೋಗಿಯೆ ಬಿಟ್ಟಿದೆ.
ನೂರೆಂಟು ಕನಸುಗಳನ್ನು ಹೊತ್ತ ತಂದೆ ತಾಯಿ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸುವುದು ಆದರೂ ಹೇಗೆ..? ವೀರನಾರಿ ಅಬ್ಬಕ್ಕನಾಗಬೇಕಾದವರು, ಒನಕೆ ಓಬವ್ವನಾಗಬೇಕಾದವರು ಹೀಗೆಲ್ಲ ಕನಸಿನ ದಾರಿಯಲ್ಲಿ ಸಾಗಬೇಕಾದವರು ತನ್ನ ಗುರಿ ತಲುಪುವುದಾದರೂ ಹೀಗೆ..?
ಹೆತ್ತವರ ಕನಸು ನನಸಾಗದೆ ಉಳಿಯಿತಿ...!
ದೇವರು ಮೆಚ್ಚದಂತಹ ಕೃತ್ಯಗಳು ಹೀಗೆ ಮುಂದುವರಿದರೆ ಮುಂದೊಂದು ದಿನ ಸ್ತ್ರೀ ಶಾಪದಿಂದ ಇಡೀ ಭೂ ಮಂಡಲವೇ ಸರ್ವನಾಶವಾಗುವುದಂತು ಶತಸಿದ್ದು. ಇದನ್ನು ಯಾವ ಜ್ಯೋತಿಷ್ಯನು ಹೇಳಬೇಕೆಂದಿಲ್ಲ. ಅತ್ಯಾಚಾರಗಳು ನಡೆಯದಂತೆ ಕಾನೂನು ಕ್ರಮ ಕೈಗೊಳ್ಳಿ, ಈಗಾಗಲೆ ಜೈಲು ಸೇರಿರುವ ಕಾಮುಕರಿಗೆ ತಕ್ಕ ಶಿಕ್ಷೆಯನ್ನು ನೀಡಿ, ಮುಂದೆ ಒಬ್ಬ ಪುರುಷ ಹೆಣ್ಣನ್ನು ಮುಟ್ಟಲು ಯೋಚನೆ ಮಾಡಿದರೆ ಆತನಿಗೆ ಆ ಶಿಕ್ಷೆ ನೆನಪಾಗಬೇಕು ಆತ ಹೆಣ್ಣನ್ನು ಕಣ್ಣೆತ್ತಿ ನೋಡಲು ಯೋಚನೆ ಮಾಡಬೇಕು ಆ ರೀತಿಯಲ್ಲಿ ಶಿಕ್ಷೆಯೊಂದನ್ನು ಕೈಗೆತ್ತಿಕೊಂಡು ನಮ್ಮ ಪ್ರಪಂಚದಲ್ಲಿರುವ ಎಲ್ಲಾ ಸಹೋದರಿಯರ, ಮಾತೆಯರ ಮಾನ ಪ್ರಾಣ ಉಳಿಸಿ
ಜೀವ ಕಳೆದುಕೊಂಡಂತಹ ಆ ಅಮಾಯಕ ಹೆಣ್ಣು ಜೀವಗಳಿಗೆ ನ್ಯಾಯ ಕೊಡಿಸಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ.
✍️: ಸುಹಾನ್. ಬಿ. ಜೆ ಬೆಳ್ಳಾರೆ.
0 ಕಾಮೆಂಟ್‌ಗಳು