ಭೂಮಿಯ ಸುತ್ತಾ ಟೆಕ್ನಾಲಜಿ...!


ನಮ್ಮಲ್ಲಿ ಒಂದು ಸಣ್ಣ ಮೊಬೈಲ್ ಇದೆ ಅಂದುಕೊಳ್ಳೊಣ. ಅದರಲ್ಲಿ ಇನ್ಟ್ಸಾಗ್ರಾಮ್, ಪೇಸ್ ಬುಕ್, ವಾಟ್ಸಪ್ ನಂತಹ ಯಾವುದೇ ಸೋಷಿಯಲ್ ಮೀಡಿಯಗಳನ್ನು ಉಪಯೋಗಿಸಲು ಸಾಧ್ಯವಿಲ್ಲ. ಈಗಿನ ಕಾಲದಲ್ಲಿ ನಮಗೆ ಮುಖ್ಯವಾಗಿ ಬೇಕಾಗಿರುವುದು ಸೋಷಿಯಲ್ ಮೀಡಿಯಾ. ಕುಳಿತಲ್ಲಿಂದ ಇಡೀ ಪ್ರಪಂಚದಲ್ಲಾಗುವ ಆಗು- ಹೋಗುಗಳ ಕುರಿತು ಕ್ಷಣದ ಅಪ್ಡೇಟ್ ಪಡೆಯುವುದಕ್ಕೆ ಮೊಬೈಲ್ ನ್ನು ಹೆಚ್ಚಾಗಿ ಬಳಕೆ ಮಾಡುತ್ತೇವೆ.  ಅದೇ ಕಾರಣಕ್ಕೆ ನಾವು ಸಣ್ಣ ಮೊಬೈಲ್ ನ್ನು ಸ್ವಲ್ಪ ದೂರ ತಳ್ಳಿ, ಆಂಡ್ರಾಯ್ಡ್ ನಂತಹ ಸಿಸ್ಟಮ್ ನ್ನು ಉಪಯೋಗಿಸಲು ಮುಂದಾಗಿದ್ದೇವೆ. ಇಲ್ಲಿ ಕಾಲ‌ ಬದಲಾಯಿತಾ.. ಅಥವಾ ಕಾಲಕ್ಕೆ ತಕ್ಕ ಹಾಗೆ ಮಾನವ ಬದಲಾಗುತ್ತಿದ್ದಾನ..! 

ಮಾನವ ದಿನ ಕಳೆದಂತೆ ಬಯಸುವುದು ಹೊಸತನವನ್ನು, "ಬದಲಾಗಬೇಕು- ಬದಲಾಯಿಸಬೇಕೆಂಬ" ಹಂಬಲದಲ್ಲಿ ದಿನಚರಿಗಳು ನಡೆಯುತ್ತಿವೆ. ಅದಕ್ಕೆ ತಕ್ಕ ಹಾಗೆ ಸಿಸ್ಟಮ್ ಗಳನ್ನು ಬಳಸಿಕೊಂಡು ಪ್ರಪಂಚಕ್ಕೆ ಈ ದಿನದ ಹೊಸತನವನ್ನು ಪರಿಚಯಿಸುತ್ತಾನೆ. ಉಸಿರು ನಿಂತ ದೇಹವನ್ನು ಮತ್ತೆ ಎದ್ದು ಕೂರುವಂತೆ ಮಾಡುವ ಕಾಲ ಇದು. ಹಾಗಾಗಿ ಟೆಕ್ನಾಲಜೀಸ್ ಅನ್ನೋದು ಪ್ರಪಂಚವನ್ನು ಬದಲಾಯಿಸದೆ ಜನರ ಯೋಚನೆಯನ್ನು ಬದಲಾಯಿಸುತ್ತಾ ಬುದ್ದಿವಂತಿಕೆಯನ್ನು ಹೆಚ್ಚಾಗಿಸುತ್ತಾ ಸಾಗುತ್ತಿದೆ, ಪ್ರತಿಯೊಂದಕ್ಕೂ ನಾವು ಟೆಕ್ನಾಲಜಿಯನ್ನು ಅವಲಂಬಿಸಿದ್ದು, ಇದು ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ. ಮಾನವ  ಯಾವ ರೀತಿ ಬೆಳವಣಿಯನ್ನು ಪಡೆಯುತ್ತಾನೋ ಅದೇ ರೀತಿ ದುನಿಯಾ ಕೂಡ ಬೆಳೆಯುತ್ತಿರುವುದನ್ನು ಕಾಣುತ್ತಿದ್ದೇವೆ,  ಟೆಕ್ನಾಲಜೀಸ್ ಪ್ರಪಂಚದಲ್ಲಿ ನಾವು  ದಿನದಲ್ಲಿ ಅಪ್ಡೇಟ್ ಬಯಸುವ  ಹಿಂದಿನ ಯುಗವನ್ನು ಮರೆತುಬಿಡುತ್ತಿದ್ದೇವೆ ಇದು ಅನಿವಾರ್ಯ. 

ಪ್ರಪಂಚ ಹೊಸತವನ್ನು ಪರಿಚಯಿಸುವಾಗ ಮಾನವ ಅದನ್ನು ಪಡೆದುಕೊಳ್ಳುವುದಕ್ಕೆ ಮುಂದಾಗುತ್ತಾನೆ. ಈ ಭೂಮಿಯ ಸುತ್ತಾ ನೀರಿದೆ ನಡುವೆ ಭೂಮಿ ಇದೆ ಅನ್ನೋದನ್ನು ಪುಸ್ತಕದಲ್ಲಿ ಓದಿದ್ದೇವೆ ನಿಜ, ಇನ್ನು ಮುಂದಿನ ಪೀಳಿಗೆಗೆ ಮಕ್ಕಳು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಭೂಮಿಯ ಸುತ್ತಾ ಟೆಕ್ನಾಲಜಿ‌ ಇದೆ ನಡುವೆ ಭೂಮಿ ಇದೆ ಎನ್ನುವ ಮಟ್ಟಕ್ಕೆ ತಲುಪುವ ದುನಿಯಾ ಇದಾಗಿದೆ. ಬದಲಾಗದ ಕಾಲಗಟ್ಟದಲ್ಲಿ ಪ್ರಪಂಚ ಹೇಗಿರಬಹುದು ಅನ್ನೋದನ್ನು ಊಹಿಸಲು ಅಸಾಧ್ಯವಾಗಬಹುದು. ಮುಂದಿನ ದಿನಗಳಲ್ಲಿ ಟೀಚರ್ ಇಲ್ಲದ ಶಾಲೆಗಳು ಪ್ರಾರಂಭಗೊಂಡು ಟೆಕ್ನಾಲಜಿಗಳು ತರಗತಿಗಳನ್ನು ನಡೆಸಬಹುದು. ವಿವಿಧ ಕಛೇರಿಗಳಲ್ಲಿ ಟೆಕ್ನಾಲಜಿಗಳನ್ನೆ ನಾವು ಅಧಿಕಾರಿಗಳನ್ನಾಗಿ ಕಾಣುವ ಸಮಯ ಬರಬಹುದು. ಯುಗಗಳು ಉರುಳಿದಂತೆ ಬದಲಾವಣೆಗಳು ಸಹಜ


ಲೇಖನ: ಹರೀಶ್ ಪುತ್ತೂರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು