ಗಣಿನಾಡಿನ ಸೆರೆಮನೆಗೆ ದರ್ಶನ್ ತೂಗುದೀಪ್

 

ರೇಣುಕಾ ಸ್ವಾಮಿಯ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ್ ಗೆ ರಾಜಾತಿಥ್ಯಿ ನೀಡಲಾಗುತ್ತಿರುವ ಬಗ್ಗೆ ಕೆಲವು ದಿನಗಳಿಂದ ಪೋಟೊಗಳು ವೈರಲ್ ಆಗಿದ್ದು, ಇಂದು ದರ್ಶನ್ ರವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. 

ಸೆರೆಮನೆಯೊಳಗೆ ಕುಳಿತು ಸಿಗರೇಟ್ ಸೇದುವುದು, ಚಯರ್ ನಲ್ಲಿ ಕುಳಿತು ಸಾಮಾನ್ಯನಂತೆ ಕಾಣಿಸಿಕೊಂಡ ಪೋಟೊ ವೈರಲ್ ಆಗಿತ್ತು, ನಂತರ ವೀಡಿಯೊ ಕರೆ ಮಾಡಿರುವ ಪೋಟೊಗಳು ಸಹ ವೈರಲ್ ಆಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಲಯವ ದರ್ಶನ್ ನನ್ನು ಯಾವುದೇ ವ್ಯವಸ್ಥೆಗಳಿಲ್ಲದ ಜೈಲಿಗೆ ಸ್ಥಳಾಂತರಿಸಲು ಅನುಮತಿ ನೀಡಿದೆ. ಇಂದು ದರ್ಶನ್ ಗಣಿನಾಡಿನ ಸೆರೆಮನೆ ಸೇರಳಿದ್ದಾರೆನ್ನಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು