ಯುವತಿಯ ಬಿಕಿನಿ ಪೋಟೋಶೂಟ್ ಗೆ ಪೋಲಿಸರ ತಡೆ,


ಉಡುಪಿ ಜಿಲ್ಲೆಯ ಪಡುಕೆರೆ ಬೀಚ್‌ನಲ್ಲಿ ಯುವತಿಯೊಬ್ಬರು ಬಿಕಿನಿ ಫೋಟೋಶೂಟ್ ಮಾಡಿಸಿಕೊಳ್ಳುವ ಸಂದರ್ಭ ಪೊಲೀಸರು ತಡೆದಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಯುವತಿ ಸೋಸಿಯಲ್ ಮೀಡಿಯಾದ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಪೋಲಿಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವತಿಯ ಬಿಕಿನಿ ಫೋಟೋಶೂಟ್ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. 

ಈ ವಿಚಾರವಾಗಿ ಇನ್‌ಸ್ಟಾಗ್ರಾಂನಲ್ಲಿ ಫೋಟೋಶೂಟ್ ಮಾಡಿದ ಫೋಟೋ ಸಹಿತ ಮಾಹಿತಿ ನೀಡಿರುವ ಯುವತಿ, ಪಡುಕೆರೆ ಬೀಚ್‌ನಲ್ಲಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಫೋಟೋಶೂಟ್ ಮಾಡಿಸುತ್ತಿದ್ದಾಗ ಬಟ್ಟೆ ಬದಲಿಸುವಂತೆ ಸ್ಥಳೀಯ ಪೊಲೀಸರು ಸೂಚಿಸಿದ್ದಾರೆ. ನೈತಿಕ ಪೊಲೀಸ್‌ಗಿರಿ ನಡೆಸಲು ಸ್ಥಳೀಯರು ಯಾರೆಂದು ಯುವತಿ ಪ್ರಶ್ನಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು