ತ್ಯಾಗರಾಜ ಎಂಬಲ್ಲಿ ಸ್ಕೂಟರ್ ಪಲ್ಟಿ, ಕೆಯ್ಯೂರಿನ ವ್ಯಕ್ತಿ ಗಂಭೀರ

 


ಪುತ್ತೂರಿನಿಂದ ಗಣೇಶೋತ್ಸವ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂತಿರುಗಿ ಬರುತ್ತಿದ್ದ ವೇಳೆ ಸ್ಕೂಟರ್ ಪಲ್ಟಿಯಾಗಿ ಕೆಯ್ಯೂರಿನ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡಿದ್ದಾರೆ‌.
ಸೆ. 10 ರಂದು ಪುತ್ತೂರು ಮಹಾಲಿಂಗೇಶ್ವರ ದೇವಾಲಯ ವಠಾರದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಘೊಂಡು ರಾತ್ರಿ ವೇಳೆ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ತ್ಯಾಗರಾಜ ಎಂಬಲ್ಲಿ ಸ್ಕೂಟರ್ ಪಲ್ಟಿಯಾಗಿದೆ.
ಗಾಯಗೊಂಡ ವ್ಯಕ್ತಿಯನ್ನು ಕೆಯ್ಯೂರಿನ ಎರಕ್ಕಳ ಬೆಳಿಯಪ್ಪ ಗೌಡರ ಪುತ್ರ ಕೀರ್ತನ್ ಎಂದು ಗುರುತಿಸಲಾಗಿದ್ದು, ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತರಲಾಗಿತ್ತು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು