ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ಉಪನ್ಯಾಸಕಿ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಸುಳ್ಯದ ಬೀರಮಂಗಲ ನಿವಾಸಿ ಶ್ರೀಮತಿ ಸುನಂದಾ ಅಚ್ಚುತ್ತಾ ಪೂಜಾರಿಯವರು ಈಶ್ವರಮಂಗಲದ ಮೇನಾಳದಲ್ಲಿ ತರವಾಡು ಮನೆಗೆ ಕಾರ್ಯಕ್ರಮ ನಿಮಿತ್ತ ಬೈಕ್ ನಲ್ಲಿ ಹೋಗುತ್ತಿದ್ದಾಗ ಮಳೆ ಬಂದಿರುವ ಕಾರಣ ಕೊಡೆ ಬಿಡಿಸುವ ವೇಳೆ ಜೋರಾದ ಗಾಳಿ ಮಳೆಗೆ ಬೈಕ್ ನಿಂದ ಅವರು ಜಾರಿ ಕೆಳಗೆ ಬಿದ್ದಿದ್ದು ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೆಳದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆಂದು ತಿಳಿದು ಬಂದಿದೆ. ಅವರು ಕೆಯ್ಯೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇವರ ನಿಧಾನಕ್ಕೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕ ವೃಂದ, ಮತ್ತು ವಿದ್ಯಾರ್ಥಿ ವೃಂದದಿಂದ ಸಂತಾಪ ಸೂಚಿಸಿದ್ದಾರೆ.
0 ಕಾಮೆಂಟ್‌ಗಳು