ಮುನಿರತ್ನ ವಶಕ್ಕೆ ಪಡೆದ ಫೊಲೀಸರು: ಬೆಂಗಳೂರಿನಿಂದ ನಾಪತ್ತೆಯಾದ ಮುನಿರತ್ನ‌ ಪತ್ತೆಯಾಗಿದ್ದು ಎಲ್ಲಿ?


ಶಾಸಕ ಮುನಿರತ್ನ ಅವರನ್ನು ಲಂಚ ಹಾಗೂ ಜಾತಿ ನಿಂದನೆ ಆರೋಪದ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೋಲಾರ  ಪೊಲೀಸರ ಸಹಕಾರ ಪಡೆದುಕೊಂಡು ಕರ್ನಾಟಕ ಆಂದ್ರ ಗಡಿಭಾಗ ನಂಗ್ಲಿ ಗ್ರಾಮದ ಬಳಿ ವಶಕ್ಕೆ ಪಡೆದಿದ್ದಾರೆ. ಶಾಸಕರನ್ನು ಬಂಧಿಸಿ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ಪೊಲೀಸರು ಕರೆ ತರಲಿದ್ದಾರೆ. ಮುನಿರತ್ನ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೆ ಬೆಂಗಳೂರು ಬಿಟ್ಟು ನಾಪತ್ತೆಯಾಗಿದ್ದರು.ಆಂದ್ರದ ಚಿತ್ತೂರಿನತ್ತ ಪ್ರಯಾಣ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಎರಡು ಪ್ರತ್ಯೇಕ ಪ್ರಕರಣ ದಾಖಲಾದ ಹಿನ್ನೆಲೆ ಶಾಕರನ್ನು ಬಂಧಿಸಲಾಗಿದೆ. ಅವರ ವೈದ್ಯಕೀಯ ತಪಾಸಣೆ ಬಳಿಕ ಪೊಲೀಸರು ಶಾಸಕ ಮುನಿರತ್ನರನ್ನ ನ್ಯಾಯಾದೀಶರ ಮನೆಗೆ ಹಾಜರ್ ಪಡಿಸುವ ಸಾಧ್ಯತೆ ಇದೆ. ಒಂದು ವೇಳೆ ಇಂದು ಹಾಜರ್ ಪಡಿಸದಿದ್ರೆ ನಾಳೆ ಸಂಜೆಯ ತನಕ ಸಮಯ ಇದೆ. ಹಾಗಾಗಿ ನಾಳೆ ಹಾಜರ್ ಕೂಡ ಪಡಿಸುವ ಸಾಧ್ಯತೆ ಇದೆ.ನಾಳೆ ಭಾನುವಾರ ಹಿನ್ನೆಲೆ ನ್ಯಾಯಾಧೀಶರ ಮನೆಗೆ ಹಾಜರ್ ಪಡಿಸಲಿದ್ದಾರೆ. ಶಾಸಕ ಮುನಿರತ್ನ ಅವರಿಗೆ ಪರಪ್ಪನ ಅಗ್ರಹಾರ ಫಿಕ್ಸ್ ಎಂದು ಹೇಳಲಾಗುತ್ತಿದೆ. ನಾಳೆ ಭಾನುವಾರ ರಜೆ, ಸೋಮವಾರ ಈದ್ ಮೀಲಾದ್ ರಜೆ ಹಿನ್ನೆಲೆ ನ್ಯಾಯಾಂಗ ಬಂಧನಕ್ಕೆ ಕೊಡುವ ಸಾಧ್ಯತೆ ಇದೆ. ಈ ಹಿನ್ನೆಲೆ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರಕ್ಕೆ ಹಾಕಬಹುದು. ಹಾಗಾಗಿ ಸೋಮವಾರದ ನಂತ್ರ ಅಂದ್ರೆ ಮಂಗಳವಾರ ಕೋರ್ಟ್ ಗೆ ಹಾಜರ್ ಪಡಿಸುವ ಸಾಧ್ಯತೆ ಇದೆ. ಮೊದಲು ಒಂದು ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಗೆ ಪಡೆಯಲು ಪೊಲೀಸರು ಮನವಿ ಮಾಡಬಹುದು. ನಂತರ ಪೊಲೀಸರು ವಿಚಾರಣೆ ಮಾಡಲಿದ್ದಾರೆ.

ಪ್ರಕರಣ ಸಂಬಂದ ಮುನಿರತ್ನ ಅವರನ್ನು ವಿಚಾರಣೆ ಬಳಿಕ ಖಾಕಿ ವಾಯ್ಸ್ ಸ್ಯಾಂಪಲ್ ಪಡೆಯಲಿದ್ದಾರೆ. ಈಗಾಗಲೇ ದೂರುದಾರ ಕೊಟ್ಟಿರುವ ವಾಯ್ಸ್ ನನ್ನದು ಅಲ್ಲ, ಯಾರೊ ನನ್ನ ತರ ಮಾತನಾಡಿರುವ ವಾಯ್ಸ್ ಅದು. ವಾಯ್ಸ್ ಅನ್ನು ಮಾರ್ಪಿಕ್ ಮಾಡಿ ಅಡಿಯೊ ಮಾಡಿರುವ ಸಾಧ್ಯತೆ ಇದೆ. ಹಾಗಾಗಿ ಇದು ನಾನು ಮಾತನಾಡಿರುವ ಅಡಿಯೊ ಅಲ್ಲ ಎಂದು ಶಾಸಕ ಮುನಿರತ್ನ ಸ್ಪಷ್ಟನೆ ನೀಡಿದ್ದಾರೆ.

ಈ ಹಿನ್ನೆಲೆ ಅಡಿಯೋ ಮುನಿರತ್ನ ಅವರ ಅಡಿಯೋನಾ? ಇಲ್ಲ ಮಾರ್ಪಿಂಗ್ ಮಾಡಿರುವ ಅಡಿಯೋನಾ? ಎಂದು ಪರಿಶೀಲನೆ ಮಾಡಲು ಎಫ್ ಎಸ್ ಎಲ್ ಗೆ ಪೊಲೀಸರು ಕೊಡಲಿದ್ದಾರೆ. ಎಫ್ ಎಸ್ ಡಲ್ ವರದಿ ಆಧರಿಸಿ ಪ್ರಕರಣದ ತನಿಖೆ ನಡೆಯಲಿದೆ.

ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ಗೆ ಶಾಸಕ ಮುನಿರತ್ನ ಪ್ರತಿಕ್ರಿಯಿಸಿದ್ದು, ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು, 15 ವರ್ಷದಿಂದ ನನ್ನ ಮೇಲೆ ಯಾವೊಬ್ಬ ಗುತ್ತಿಗೆದಾರರು ಆರೋಪಿಸಿದ್ದಿರಲಿಲ್ಲ. ಲೋಕಸಭಾ ಚುನಾವಣೆ ಮುಗಿದ ನಂತರ ನನ್ನ ಮೇಲೆ ಬಹಳಷ್ಟು ಸಂಚು ರೂಪಿಸಿದ್ದಾರೆ. ದೂರು ಕೊಟ್ಟ ವ್ಯಕ್ತಿ 7-8ವರ್ಷದಿಂದ ನಮ್ಮಲ್ಲಿ ಕೆಲಸ ಮಾಡ್ತಿದ್ದ. ಯಾವತ್ತೂ ದೂರು ಕೊಡದವ ಇವತ್ತು ನನ್ನ ಮೇಲೆ ದೂರು ಕೊಟ್ಟಿದ್ದಾರೆ ಎಂದು ಹೇಳಿದರು.

ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಅಕ್ರಮಕ್ಕೆ ಸಂಭಂದಿಸಿದಂತೆ ನಾನು ಪತ್ರ ಬರೆದಿದ್ದೆ. ಪ್ರತಿ ತಿಂಗಳು 15ಲಕ್ಷ ಅವ್ಯವಹಾರ ಆಗ್ತಿರೋದು ಕಂಡು ಬಂದು ತನಿಖೆ ಮಾಡಿ ಎಂದು ಪತ್ರ ಬರೆದಿದ್ದೆ. ಯಾವಾಗ್ ಪತ್ರ ಬರೆದೆನೋ ಅಗಿಂದ ನನ್ನ ಮೇಲೆ ಷಡ್ಯಂತ್ರ ಆರಂಭವಾಯ್ತು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು