ಧಂಗೆ, ಗಲಾಟೆ ಎಬ್ಬಿಸಲು ಬಿಜೆಪಿಯಿಂದ ತರಬೇತಿ: ದಿನೇಶ್ ಗುಂಡುರಾವ್ ಹೇಳಿಕೆ


ಕರಾವಳಿಯಲ್ಲಿ ಗಲಭೆ, ಧಂಗೆ ಎಬ್ಬಿಸುವುದಕ್ಕೆಂದೆ ಬಿಜೆಪಿ ಮತ್ತು ಸಂಘ ಪರಿವಾರದಲ್ಲಿ ತರಭೇತಿ ನೀಡಲಾಗುತ್ತಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಹೇಳಿದ್ದಾರೆ. 

ಮಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯನವರ ವಿರುದ್ದ ಪ್ರಾಸಿಕ್ಯೂಷನ್ ಗೆ ಸಂಬಂಧಿಸಿ ಮಾತಾಡಿರುವ ಅವರು ಬಿಜೆಪಿಯವರು ಎಲ್ಲಿ, ಯಾವಾಗ ಹೇಗೆ ಧಂಗೆ ಎಬ್ಬಿಸಬೇಕು, ಗಲಾಟೆ ಮಾಡಬೇಕೆಂದು ತರಭೇತಿ ನೀಡುತ್ತಾರೆ. ರಾಜ್ಯಪಾಲರ ನಡೆಯ ಬಗ್ಗೆ ಇದೀಗ ಇಡೀ ರಾಜ್ಯಕ್ಕೆ ಗೊತ್ತಾಗಿದೆ ಜನರು ಅರ್ಥ ಮಾಡಿಕೊಂಡಿದ್ದಾರೆ. ಕೇಸರಿ ನಾಯಕರು ಸುಳ್ಳನ್ನು ಸತ್ಯ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು