ಬಿಜೆಪಿ ಮುಖಂಡ, ಪುತ್ತಿಲ ಪರಿವಾರದ ಪುತ್ತೂರಿನ ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದಿರುವ ಅರುಣ್ ಕುಮಾರ್ ಪುತ್ತಿಲರ ವಿರುದ್ದ ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಸಾಮೇತ್ತಡ್ಕ ಮಹಿಳೆಯೊಬ್ಬರು ಪುತ್ತೂರು ಮಹಿಳಾ ಠಾಣೆಯ ಮೆಟ್ಟಿಲೇರಿದ್ದು ನನಗೆ ಲೈಂಗಿಕ ದೌರ್ಜನ್ಯ ಹಾಗೂ ನಂಬಿಕೆ ದ್ರೋಹ ಮಾಡಿದ್ದಾರೆಂದು ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ.
2023 ರ ಜೂನ್ ನಲ್ಲಿ ನನಗೆ ಬೆಂಗಳೂರಿನ ಹೋಟೆಲೊಂದಕ್ಕೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಅಲ್ಲದೆ ಆ ಸಮಯಗಳಲ್ಲಿನ ವೀಡಿಯೋ, ಪೋಟೊಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.
2023 ರಲ್ಲಿ ಆಗಿರುವ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ ಎಂದರೆ ಇಷ್ಟು ದಿನ ಆ ಮಹಿಳೆ ಯಾಕೆ ಕೇಸ್ ದಾಖಲಿಸಲಿಲ್ಲ..! ಅರುಣ್ ಕುಮಾರ್ ಪುತ್ತಿಲರು ರಾಜಕೀಯವಾಗಿ ಬೆಳೆಯುತ್ತಿರುವುದನ್ನು ತಡೆಯಲು ಈ ರೀತಿಯ ಆರೋಪಗಳನ್ನು ಹಾಕಿ ಅವರ ವರ್ಚಸಿಗೆ ಧಕ್ಕೆ ತರುವ ಹುನ್ನಾರವೇ?
ಈ ಎಲ್ಲಾ ಪ್ರಶ್ನೆಗಳಿಗೆ ತನಿಖೆಯ ನಂತರವಷ್ಟೆ ಉತ್ತರ ಸಿಗಲಿದೆ.
0 ಕಾಮೆಂಟ್‌ಗಳು