ಗಣೇಶೋತ್ಸವ ಆಚರಣೆಯ ಹಣದ ವಿಚಾರದಲ್ಲಿ ಗಲಾಟೆ, ಒಬ್ಬ ಕೊಲೆ

 

ನಾಡಿನೆಲ್ಲೆಡೆ ಗಣೇಶೋತ್ಸವ ಕಾರ್ಯಕ್ರಮ  ನಡೆಯಿತ್ತಿದ್ದು ಈ ಅದ್ದೂರಿ ಕಾರ್ಯಕ್ರಮಕ್ಕೂ ಮೊದಲು ಊರೂರು ಸುತ್ತಿ ಹಣ ಸಂಗ್ರಹಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಅದೇ ರೀತಿಯ ಗಣೇಶೋತ್ಸವ ಕಾರ್ಯಕ್ರಮ ಕಾರವಾರದಲ್ಲೂ ನಡೆಯುತ್ತಿದ್ದು ಇದೇ ವಿಚಾರದಲ್ಲಿ ಒಬ್ಬನ ಕೊಲೆಯಾಗಿದೆ.

ಕಾರವಾರ ನಗರದ ಸಾಯಿಕಟ್ಟಾ ಪ್ರದೇಶದ ಬಿಂಧು ಮಾಧವ ದೇವಸ್ಥಾನದ ಬಳಿ ಇರುವ ಬೋರ್ಕರ್ ಕುಟುಂಬದಲ್ಲಿ ಗಣೇಶ ವಿಗ್ರಹ ದ ಎದುರಿನ ಹಣಕ್ಕಾಗಿ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.


ಸಂದೇಶ ಪ್ರಭಾಕರ ಬೋರ್ಕರ್ ಎಂಬ ಯುವಕನನ್ನು ಆತನ ಚಿಕ್ಕಪ್ಪನ ಮಗ ಮನೀಷ್ ಮನೋಹರ ಬೋರ್ಕರ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ಮನೀಷ್ ,ಕಿರಣ್ ಹಾಗೂ ಕೊಲೆಗೆ ಸಹಕರಿಸಿದ ಆರೋಪದಲ್ಲಿ ಇನ್ನಿಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು