ಬಂಟ್ವಾಳದಲ್ಲಿ ಟಿಪ್ಪರ್ ಲಾರಿ ಡಿಕ್ಕಿ: ಸಹಸವಾರ ಮೃತ್ಯು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ

24.09.2024 ರಂದು ಬೆಳಗಿನ ಜಾವ, 21 ವರ್ಷದ ಯತೀನ್ ಕುಮಾರ್.ಸಿ ಮತ್ತು ಅವರ ಸ್ನೇಹಿತ ಸೇವಂತ್ (21) ಹಾಗೂ ಮೋಟಾರ್ ಸೈಕಲ್ ಸವಾರ ಚೇತಕ್.ಟಿ.ಕೆ (21), ವಳಚ್ಚಿಲ್ ನಿಂದ ಪುತ್ತೂರಿಗೆ ತೆರಳುವಾಗ ಅಪಘಾತಕ್ಕೊಳಗಾದರು. ಬಂಟ್ವಾಳ ತಾಲೂಕು, ಪುದು ಗ್ರಾಮದ ಮಾರಿಪಳ್ಳ ಜಂಕ್ಷನ್ ಬಳಿ KL-40-H-2955 ನಂ ಟಿಪ್ಪರ್ ಲಾರಿ ಅಪಘಾತಕ್ಕೆ ಕಾರಣವಾಯಿತು. ಟಿಪ್ಪರ್ ಚಾಲಕನ ನಿರ್ಲಕ್ಷ್ಯದಿಂದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಮೂವರು ಗಾಯಗೊಂಡರು. 

ಪಿರ್ಯಾದಿದಾರ ಯತೀನ್ ಕುಮಾರ್ ಮತ್ತು ಸವಾರ ಚೇತಕ್.ಟಿ.ಕೆ ಆಸ್ಪತ್ರೆಗೆ ದಾಖಲಾಗಿದ್ದು, ಸಹಸವಾರ ಸೇವಂತ್ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 141/2024 ಅಡಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು