ಎಂದಿನಂತೆ ಇವತ್ತು ಕೂಡ ಆತ ತರಗತಿಯಲ್ಲಿ ಪಾಠ ಕೇಳುತ್ತಿದ್ದ, ಈ ವೇಳೆ ಯಾರೂ ಸಹ ಊಹಿಸಿರದ ಘಟನೆಯೊಂದು ತರಗತಿಯಲ್ಲಿ ನಡೆದಿದೆ.
ಶಾಲೆ ಮಾತ್ರವಲ್ಲ ಇಡೀ ಊರನ್ನೆ ದುಃಖದ ಕಡಲಿಗೆ ಕರೆದೊಯ್ದಿದೆ.
ರಾಯಾಚೂರು ಜಿಲ್ಲೆಯ ಸಿರವಾರ ಜಿಲ್ಲೆಯ ಶಾಲೆಯೊಂದರಲ್ಲಿ ತರಗತಿಯೊಳಗೆ ವಿದ್ಯಾರ್ಥಿಯೊಬ್ಬ ಪಾಠ ಕೇಳುತ್ತಿರುವಾಗಲೆ ಹೃದಯಘಾತಕ್ಕೆ ಬಲಿಯಾಗಿದ್ದಾನೆ.
ಆತನನ್ನು ತರುಣ್ ಅತ್ತನೂರು (14) ಎಂದು ಗುರುತಿಸಲಾಗಿದೆ.
ಖಾಸಾಗಿ ಶಾಲೆಯೊಂದರಲ್ಲಿ 8 ತರಗತಿಯಲ್ಲಿ ಓದುತ್ತಿದ್ದ ಈತ ಎಂದಿನಂತೆ ಶಾಲೆಗೆ ಬಂದು ಪಾಠ ಕೇಳುತ್ತಿದ್ದ, ಈ ವೇಳೆ ತರಗತಿಯೊಳಗೆ ಕುಸಿದು ಬಿದ್ದಿದ್ದಾನೆ. ತಕ್ಷಣ ವಿದ್ಯಾರ್ಥಿಯನ್ನು ಅಲ್ಲಿನ ಶಿಕ್ಷಕರು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದರು.
ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಕಾರಣ ಆತನನ್ನು ರಾಯಾಚೂರಿನ ಖಾಸಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮದ್ಯೆ ಆತ ಹೃದಯಘಾತಕ್ಕೆ ಬಲಿಯಾಗಿದ್ದಾನೆ.
0 ಕಾಮೆಂಟ್‌ಗಳು