ನಮ್ಮ ಊರಿನ ಅವಿವೇಕಿ ರಾಜಕಾರಣಿಯ ಒಂದು ಕತೆ ಕೇಳಿದರೆ ನಿಮಗೆ ಇಂತವನಿಗೂ ನಾವು ಮತ ಹಾಕಿದ್ದೇವ ಅಂತ ತಲೆ ಮೇಲೆ ಕೈ ಇಡಬಹುದು .


ಓರ್ವ ಪ್ರಾಮಾಣಿಕ ಭ್ರಷ್ಟಾಚಾರಹಿತ  ಸಜ್ಜನ  ಅಧಿಕಾರಿಯನ್ನು ಎತ್ತಂಗಡಿ ಮಾಡಲು ಎಲ್ಲಿಯೂ  ಇಲ್ಲದ  ಪ್ರಯತ್ನ  ನಮ್ಮ ಪೆರುವಾಜೆ ಗ್ರಾಮದಲ್ಲಿ ನಡೆಯುತಿದೆ .

 ಪೆರುವಾಜೆ ಗ್ರಾಮ ಪಂಚಾಯತಿನ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್  ಇವರು ಭ್ರಷ್ಟಾಚಾರಹಿತ ಪ್ರಾಮಾಣಿಕ ಅಧಿಕಾರಿ ಊರಿನಲ್ಲಿ ಜನಮನ್ನಣೆ ಗಳಿಸಿದವರು . 

ಆದರೆ ಈ ಅವಿವೇಕಿ  ಒಬ್ಬ ಸದಸ್ಯ  ತನ್ನ ಅಕ್ರಮ ಕಾರ್ಯಗಳಿಗೆ ಯಾವುದೇ ಸ್ಪಂದನೆ ನೀಡಲಿಲ್ಲ ಅಂತ  ಯಾರದ್ದೋ ಹೆಸರಿನಲ್ಲಿ  ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗೆ   ದೂರು ಕೊಟ್ಟಿದ್ದಾನೆ.   ಸತ್ತವರನ್ನು  ಕೂಡ ನೆಮ್ಮದಿಯಿಂದ ಇರಲು ಬಿಡದ  ಪೀಡಕ  ಈತ.  ಈ ಅರ್ಜಿಯನ್ನು 3 ಜನರ ಹೆಸರಿನಲ್ಲಿ ಹಾಕಲಾಗಿದೆ . ಒಬ್ಬರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ  .ಇನ್ನೊಬ್ಬರು ಈ. ಊರಿನಲ್ಲಿ ಅಂತ ಹೆಸರಿನವರು ಯಾರು ಇಲ್ಲ. ಇನ್ನೊಬ್ಬರು ಇಹಲೋಕ ಸೇರಿ 6 ವರ್ಷ ಆಗಿದೆ ಅಂತ ಮನೆಯವರ ಮಾಹಿತಿ . ಒಬ್ಬ  ಭ್ರಷ್ಟಾಚಾರಹಿತ ಪ್ರಾಮಾಣಿಕ ಅಧಿಕಾರಿ  ಕೆಲ್ಸಾ ಮಾಡೋದು ಹೇಗೆ ಹೇಳಿ  . ಇತ್ತಿಚೆಗೆ  ಒಂದು ಪಾಪದ ಮಹಿಳೆಯನ್ನು ಲೋನ್ ಮಾಡಿ ಯಾಮರಿಸಿದ್ದು  ಗೊತ್ತಾಗಿ  ಸರಿಯಾದ  ಮಂಗಳಾರತಿ ಹಾಗಿದೆ ಅಂತ ಊರು ಮಾತಾಡ್ತಾ ಉಂಟು  

ಇಂತ ಅವಿವೇಕಿ ಸದಸ್ಯನಿಗೆ ಮತ ಹಾಕಿದ   ಜನರು  ಸ್ವಲ್ಪ ಆದರೂ ತಲೆಯಲ್ಲಿ  ಬೊಂಡು ಇದೆಯಾ ಅಂತ ತಮ್ಮಲ್ಲಿ  ತಮ್ಮನ್ನೇ  ಪ್ರಶ್ನೆ  ಮಾಡಿಕೊಳ್ಳ ಬೇಕಾದ  ಅನಿವಾರ್ಯತೆ ಇದೆ .


ಕಥೆ ನನಾಳ ಉಂಡು ಇನಿಕ್ ಇತೇ  🫡

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು