ಭರ್ಜರಿ ಗಿಫ್ಟ್ ಪಡೆದ ಕುಮಾರ್ ಕಟೀಲ್ – ಬಿಜೆಪಿ ಹೈಕಮಾಂಡ್ ಮತ್ತೆ ಚುರುಕು ?

ದಕ್ಷಿಣ ಕನ್ನಡದ ಮಾಜಿ ಸಂಸದ ಹಾಗೂ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಎಂ.ಪಿ. ಚುನಾವಣೆ ಟಿಕೆಟ್ ಸಿಗದ ಹಿನ್ನೆಲೆ, ಇತ್ತೀಚೆಗೆ ಬಿಜೆಪಿ ನಾಯಕರಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದರು, ಇದರಿಂದಾಗಿ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿಯಲ್ಲಿದ್ದರು. ಆದರೆ, ಈಗ ಬಿಜೆಪಿ ಅವರಿಗಾಗಿ ಸಕಾರಾತ್ಮಕ ಬೆಳವಣಿಗೆ ತೋರಿಸಿದೆ. 
ಬಿಜೆಪಿ ಹೈಕಮಾಂಡ್ ನಳೀನ್ ಕುಮಾರ್ ಕಟೀಲ್ ಅವರನ್ನು ಒಡಿಶಾ ರಾಜ್ಯದ ಬಿಜೆಪಿ ಸದಸ್ಯತ್ವ ಅಭಿಯಾನದ ಉಸ್ತುವಾರಿಯಾಗಿ ನೇಮಕ ಮಾಡಿ, ಈ ಸಂಬಂಧ ಆದೇಶ ಹೊರಡಿಸಿದೆ. 

ಮೂಲಗಳ ಪ್ರಕಾರ, ಒಡಿಶಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರಿಸುವ ಗುರಿಯನ್ನು ಬಿಜೆಪಿ ಹೊಂದಿದ್ದು, ಈ ಮಹತ್ವದ ಜವಾಬ್ದಾರಿಯನ್ನು ನಳೀನ್ ಅವರಿಗೆ ನೀಡಿ, ಅವರ ಮೇಲೆ ನಂಬಿಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಅವರು ಸೆಪ್ಟೆಂಬರ್ 17ರಂದು ಒಡಿಶಾಕ್ಕೆ ತೆರಳಿ, ಒಂದು ವಾರದವರೆಗೆ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು