ಸಜಂಕಾಡಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಕಮಲಾಕ್ಷಿ‌ ರವರನ್ನು ಸನ್ಮಾನ

 

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಜಂಕಾಡಿ ಶಾಲೆಯಲ್ಲಿ  ಸತತ 7 ವರ್ಷ ಸೇವೆ ಸಲ್ಲಿಸಿದ ಕಮಲಾಕ್ಷಿ ಮೇಡಂ ರವರನ್ನು ಸನ್ಮಾಸಿಲಾಯಿತು. 

ಈಶ್ವರಮಂಗಲದ ಸಜಂಕಾಡಿ ಶಾಲೆಯಲ್ಲಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪ ಬೆಳಗಿದ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ ಮೇಡಂ ರವರನ್ನು ಶಿಕ್ಷಕರ ದಿನಾಚರಣೆಯ ನಿಮಿತ್ತ ನಿನ್ನೆ ಶಾಲೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. 


ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಯಶೋಧ, ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ್ ರೈ, ಶ್ರೀ ಕುಮಾರ ಕೆ, ಶ್ರೀಮತಿ ಜ್ಯೋತಿ, ಶ್ರೀಮತಿ ಕಲಾವತಿ, ಕುಂಬ್ರ ಕ್ಲಸ್ಟರಿನ ಸಿಆರ್ ಪಿ ಶಶಿಕಲಾ, ನಿವೃತ್ತ ಶಿಕ್ಷಕ‌ ಸಂಯೋಜಕರಾದ ಕುಕ್ಕ ಎಂ, ಎಸ್ ಡಿ ಎಂ ಸಿ‌ ಉಪಾಧ್ಯಕ್ಷರಾದ ರಝಾಕ್ ರವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು