ಪುತ್ತೂರು:- ನಗರಸಭೆ ವ್ಯಾಪ್ತಿಯಲ್ಲಿನ ವಿವಿಧ ಸ್ಥಳಗಳಲ್ಲಿ ಗಣೇಶೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಶೋಭಾಯಾತ್ರೆ ಆರಂಭಕ್ಕೂ ಮುಂಚೆ, ಪ್ರಮುಖ ರಸ್ತೆಗಳು ಸೇರಿದಂತೆ ಎಲ್ಲಾ ಮಾರ್ಗಗಳಲ್ಲಿ ಗುಂಡಿಗಳನ್ನು ತುರ್ತು ದುರಸ್ಥಿ ಮಾಡಬೇಕೆಂದು ನಗರಸಭೆಯ ಹೊಸ ಅಧ್ಯಕ್ಷೆ ಲೀಲಾವತಿ ಮತ್ತು ಉಪಾಧ್ಯಕ್ಷ ಬಾಲಚಂದ್ರ ಪೌರಾಯುಕ್ತರಿಗೆ ಸೂಚಿಸಿದ್ದಾರೆ.
ಗಣೇಶೋತ್ಸವದ ಶೋಭಾಯಾತ್ರೆ ವಾಹನಗಳು ಈ ರಸ್ತೆಗಳು ಮತ್ತು ರಸ್ತೆಗಳಲ್ಲಿ ಗುಂಡಿ ತುಂಬಿರುವುದರಿಂದ ಅಸಮಾಧಾನ ಉಂಟಾಗಬಹುದು. ಇದರೊಂದಿಗೆ, ಗಣೇಶನ ವಿಗ್ರಹವನ್ನು ಜಲಸ್ಥಂಭನಗೊಳಿಸುವ ಸ್ಥಳದಲ್ಲಿ ಕೂಡ ಪೊದೆಗಳು ತುಂಬಿರುವುದರಿಂದ, ನಗರಸಭೆಯಿಂದ ತಕ್ಷಣವಾಗಿ ಶುದ್ಧಿಕರಣ ಮಾಡಲು ಸೂಚನೆ ನೀಡಿದ್ದಾರೆ.
0 ಕಾಮೆಂಟ್‌ಗಳು