ದ.ಕ ಡಿಸಿ ಯಾರು ಎಂದರೆ ಸಾಕು ಮಕ್ಕಳಿಗಂತು ಅವರು ಒಬ್ಬ ಟೀಚರ್ ಇದ್ದ ಹಾಗೆ, ಪೋಷಕರಷ್ಟೆ ಪ್ರೀತಿ, ವಾತ್ಸಲ್ಯ ತೋರಿಸುವ ಮಾತೆಯ ಗುಣದವರು, ಮಕ್ಕಳ ಮನಸಲ್ಲಿ ಸದಾ ನೆನಪಿಸುವ ಅವರೆ ದ. ಕ ಜಿಲ್ಲೆಯ ಮಕ್ಕಳ ಪ್ರೀತಿಯ ಜಿಲ್ಲಾಧಿಕಾರಿ ಮುಲೈ ಮುಗಿಲನ್.
ಕೆಲವು ದಿನಗಳ ಹಿಂದೆಯಷ್ಟೆ ಸುರಿದ ಭಾರಿ ಮಳೆಗೆ ಶಾಲೆಗಳಿಗೆ ಆಗಾಗ ರಜೆ ಘೋಷಣೆ ಮಾಡುವುದರ ಮೂಲಕ ಮಕ್ಕಳ ಪಾಲಿಗೆ ಪ್ರೀತಿಯ ಡಿಸಿ ಆಗಿದ್ದ ಮುಲೈ ಮುಗಿಲನ್ ರವರು ಮಕ್ಕಳೊಂದಿಗೆ ಕೆಸರು ಗದ್ದೆಯಲ್ಲಿ ಒಂದಷ್ಟು ಹೊತ್ತು ಸಮಯ ಕಳೆದಿದ್ದಾರೆ.
ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನವ ಭಾರತ್ (ರಿ) ಇವರ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಸೆ. 23 ರಂದು ನಡೆದ ಕೆಸರು ಗದ್ದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಗದ್ದೆಗಿಳಿದು ಪುಟ್ಟ ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ. ಮಕ್ಕಳು ಸಹ ಪ್ರೀತಿಯ ಜಿಲ್ಲಾಧಿಕಾರಿಗಳ ಜೊತೆಗೆ ಕೆಲ ಹೊತ್ತು ಆಡಿ ಕುಪ್ಪಳಿಸಿದ್ದು ಮತ್ತಷ್ಟು ಫುಲ್ ಖುಷಿಯಾಗಿದ್ದಾರೆ.
ಜಿಲ್ಲೆಗೊಬ್ಬ ಅಧಿಕಾರಿಯಾದರೂ ಕೂಡ ಮಕ್ಕಳೊಂದಿಗೆ ಇಂತಹ ಪ್ರೀತಿಯ ಭಾಂಧವ್ಯ ಬೆಳೆಸಿಕೊಂಡಿರುವ ಮಾನ್ಯ ಜಿಲ್ಲಾಧಿಕಾರಿಗಳ ಈ ನಡೆಗೆ ರಾಜ್ಯದ್ಯಾಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
0 ಕಾಮೆಂಟ್‌ಗಳು