ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿ ಬರೊಬ್ಬರಿ 71 ದಿನಗಳ ಬಳಿಕ ಕೇರಳ ಮೂಲದ ಅರ್ಜುನ್ ಎಂಬಾತನ ಲಾರಿ ಹಾಗೂ ನಾಪತ್ತೆಯಾಗಿದ್ದ ಅರ್ಜುನ್ ನ ಮೃತ ದೇಹ ಇಂದು ಪತ್ತೆಯಾಗಿದೆ.
ಕಳೆದ ಒಂದು ವಾರಗಳಿಂದ ಕಾರ್ಯಚರಣೆ ನಡೆಯುತ್ತಿದ್ದ ಗಂಗಾವತಿ ನದಿಯಲ್ಲಿ ಅರ್ಜುನ್ ಓಡಿಸುತ್ತಿದ್ದ ಬೆಂಜ್ ಲಾರಿ ಪತ್ತೆಯಾಗಿತ್ತು. ಇದೀಗ ಲಾರಿಯೊಳಗೆ ಅರ್ಜುನ್ ನ ಮೃತ ದೇಹ ಪತ್ತೆಯಾಗಿದೆ ಎಂದು ತಂಡದ ಮೂಲಗಳಿಂದ ತಿಳಿದುಬಂದಿದೆ.
ಲಾರಿಯೊಳಗೆ ಅರ್ಜುನ್ ಮಲಗಿದ ರೀತಿಯಲ್ಲೆ ಮೃತ ದೇಹ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
0 ಕಾಮೆಂಟ್‌ಗಳು