ಬೆಂಗಳೂರಿನ ವಯಾಲಿಕಾವಲ್ ನಲ್ಲಿ ನಡೆದ ನೇಪಾಳ ಮೂಲದ ಮಹಿಳೆ ಮಹಾಲಕ್ಷ್ಮೀ ಕೊಲೆ ಪ್ರಕರಣದ ಆರೋಪಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾಲಕ್ಷ್ಮೀಯನ್ನು 59 ಪೀಸ್ ಗಳಾಗಿ ಮಾಡಿ ಫ್ರಿಢ್ಜ್ ನಲ್ಲಿಟ್ಟ ಆರೋಪಿಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಕೊಲೆಗಾರ ಆಕೆಯ ಸ್ನೇಹಿತ ಮುಕ್ತಿ ರಂಜನ್ ರಾಯ್ ಅನ್ನೋದನ್ನು ತಿಳಿದುಕೊಂಡು ಆರೋಪಿಯ ಹುಡುಗಾಟದಲ್ಲಿ ತೊಡಗಿದ್ದರು. ಇದೀಗ ಅವನು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ.
ಮಹಾಲಕ್ಷ್ಮೀ ಪತಿ ಹೇಮಂತ್ ದಾಸ್ ನೀಡಿದ ಹೇಳಿಕೆಯಂತೆ ಪೊಲೀಸರು ಮಹಾಲಕ್ಷ್ಮೀಯ ಸ್ನೇಹಿತನಾಗಿದ್ದ ಅಶ್ರಫ್ ಹಾಗೂ ಇತರೆ ಇಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ತನಿಖೆ ನಡೆಸಿದಾಗ ಕೊಲೆಯಲ್ಲಿ ಅವರ ಪಾತ್ರವಿಲ್ಲ ಅನ್ನೋದು ಗೊತ್ತಾಗಿದೆ. ತನಿಖೆ ಮುಂದುವರೆಸಿದ ಪೊಲೀಸರಿಗೆ ಮುಕ್ತಿ ರಂಜನ್ ರಾಯ್ ಕೊಲೆ ಮಾಡಿರೋದು ಗೊತ್ತಾಗಿದೆ.
ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಮುಕ್ತಿ ರಂಜನ್ ರಾಯ್ ಮುಕ್ತಿ ರಂಜನ್ ರಾಯ್ ಒಡಿಶಾದಲ್ಲಿದ್ದಾನೆ ಅನ್ನೋದು ಗೊತ್ತಾಗಿದೆ. ಅತ್ತ ಮುಕ್ತಿ ರಂಜನ್ ರಾಯ್ ಗೂ ಪೊಲೀಸರು ಹೇಗಾದರೂ ಮಾಡಿ ನನ್ನನ್ನು ಹಿಡಿದೇ ಹಿಡಿಯುತ್ತಾರೆ ಅನ್ನೋದು ಕನ್ಫರ್ಮ್ ಆಗಿದೆ. ಇನ್ನು ಒಡಿಶಾದಲ್ಲಿ ಮುಕ್ತಿ ರಂಜನ್ ರಾಯ್ ನನ್ನು ಬಂಧಿಸಲು ಬೆಂಗಳೂರಿನಿಂದ ಪೊಲೀಸರ ತಂಡ ತೆರಳುತ್ತಿದ್ದಂತೆ ಅತ್ತ ಮುಕ್ತಿ ರಂಜನ್ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಒಡಿಸ್ಸಾದ ಭದ್ರಾಕ್ ಜಿಲ್ಲೆಯ ಪಂಡಿ ಗ್ರಾಮದ ಬೂತಕಪುರದ ನಿವಾಸಿಯಾಗಿರುವ ಮುಕ್ತಿ ರಂಜನ್ ಸೆಪ್ಟಂಬರ್ 3 ರಂದು ಮಹಾಲಕ್ಷ್ಮೀಯನ್ನು ಕೊಲೆ ಮಾಡಿ ಬೆಂಗಳೂರಿನಲ್ಲಿರುವ ತನ್ನ ಮನೆಗೆ ಬಂದು ತಮ್ಮನ ಬಳಿ ನಾನು ಮಹಾಲಕ್ಷ್ಮೀಯನ್ನು ಕೊಲೆ ಮಾಡಿ ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಇಟ್ಟಿದ್ದೇನೆ ಎಂದಿದ್ದ. ಬಳಿಕ ಎಸ್ಕೇಪ್ ಆಗೋಕೆ ಮುಂದಾಗಿದ್ದ. ಈ ವೇಳೆ ಆತನಿಗೆ ಆತನ ತಾಯಿ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಕೊಲೆ ಮಾಡಿದ ದಿನವೇ ರೈಲು ಹತ್ತಿದ್ದ ಮುಕ್ತಿ ರಂಜನ್ ರಾಯ್ ನೇರವಾಗಿ ತನ್ನ ಊರಾದ ಬೂತಕಪುರಕ್ಕೆ ಬಂದಿದ್ದ. ಮೊನ್ನೆ ರಾತ್ರಿ ಮನೆಯಿಂದ ಭದ್ರಕ್ ಗೆ ಹೋಗ್ತೀನಿ ಎಂದು ಮನೆಯವರಿಗೆ ತಿಳಿಸಿದ್ದ.ಅದರಂತೆ ಮನೆಯಿಂದ ಮುಕ್ತಿ ರಂಜನ್ ಸ್ಕೂಟಿಯಲ್ಲಿ ಹೋಗಿದ್ದ. ನಿನ್ನೆ ಬೆಳಗ್ಗೆ ಕುಳೆಪಾದ ಸ್ಮಶಾನದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಲ್ಯಾಪ್ ಟ್ಯಾಪ್ ನ್ನು ಸ್ಕೂಟಿಯಲ್ಲಿಯೇ ಇಟ್ಟು ಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
0 ಕಾಮೆಂಟ್‌ಗಳು