ದೊಡ್ಡತೋಟದಲ್ಲಿ 'ಸಮೃದ್ಧಿ ಒಡಿಯೂರು ಸಂಘ'ದ ಸದಸ್ಯರಿಂದ ಬಸ್ಸು ತಂಗುದಾಣ ನಿರ್ಮಾಣ.


ಸುಳ್ಯ ತಾಲೂಕಿನ, ದೊಡ್ಡತೋಟದಲ್ಲಿ ಹಲವು ವರ್ಷಗಳ ಹಿಂದೆಯೇ  ಪಂಚಾಯತ್ ವತಿಯಿಂದ ಬಸ್ಸು ತಂಗುದಾಣ ನಿರ್ಮಿಸಲಾಗಿದೆ, ಅಲ್ಲದೇ ಇತ್ತೀಚಿಗೆ ಅದೇ ಬಸ್ಸು ತಂಗುದಾಣಕ್ಕೆ ಟೈಲ್ಸ್ ಅಳವಡಿಸಿ ಸುಸಜ್ಜಿತವಾಗಿದೆ. ಆದರೂ ರಸ್ತೆಯ ವಿರುದ್ಧ ದಿಕ್ಕಿನಿಂದ ವಾಹನ ಹತ್ತಲು ರಸ್ತೆ ದಾಟುವ ಸಂದರ್ಭ ವಿದ್ಯಾರ್ಥಿನಿಯೊಬ್ಬಳಿಗೆ ಅಪಘಾತವಾಗಿತ್ತು, ಹಾಗೂ ಪ್ರಯಾಣಿಕರು, ಶಾಲಾ -ಮಕ್ಕಳು ರಸ್ತೆ ದಾಟುವ ಸಂದರ್ಭ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇಂತಹ ಅಪಾಯ ಮರುಕಳಿಸದಂತೆ, ಎಲ್ಲರಿಗೂ ಅನುಕೂಲವಾಗುವಂತೆ, "ಸಮಾಜಕ್ಕೆ ಒಂದಿಷ್ಟು " ಎಂಬ ಧ್ಯೇಯದೊಂದಿಗೆ 'ಸಮೃದ್ಧಿ ಒಡಿಯೂರು ಸಂಘ'ದ ಸದಸ್ಯರು ಬಸ್ಸು ತಂಗುದಾಣ ನಿರ್ಮಿಸಿ,ಅಪಾಯವನ್ನು ಕಡಿಮೆಗೊಳಿಸುವ ಕೆಲಸವನ್ನು ಮಾಡಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು