ಭಾಗವಹಿಸುವವರ ಸುರಕ್ಷತೆಗೆ ಸ್ವಯಂ ಸೇವಕರು, ಫಿಸಿಯೋತೆರಪಿಸ್ಟ್, ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಭಾಗವಹಿಸುವವರಿಗೆ ಮೈಕ್ರೋ ಚಿಪ್‌ಗಳು, ಪದಕ, ಪ್ರಮಾಣ ಪತ್ರ, ಮತ್ತು ಟೀಶರ್ಟ್‌ಗಳು ನೀಡಲಾಗುತ್ತದೆ. 1200ಕ್ಕೂ ಹೆಚ್ಚು ಮಂದಿ ನೋಂದಣಿಯಾಗಿದ್ದು, ಸ್ಥಳದಲ್ಲಿಯೂ ನೋಂದಣಿ ಅವಕಾಶವಿರಲಿದೆ.
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ, ಜಿಯೂಸ್ ಫಿಟ್ನೆಸ್, ಖೋಲೋ ಇಂಡಿಯಾ, ಮತ್ತು ಡೆಕತ್ಲಾನ್ ಸಹಯೋಗದಲ್ಲಿ ಅ.6ರಂದು ದಸರಾ ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವನ್ ಸಿಟಿ ವನ್ ಸ್ಪಿರಿಟ್' ಮತ್ತು
ಎಲ್ಲಿ ಒಗ್ಗಟ್ಟಿದೆಯೂ ಅಲ್ಲಿ ಬಲವಿದೆ' ಎಂಬ ಉದ್ದೇಶದೊಂದಿಗೆ 21 ಕಿ.ಮೀ., 10 ಕಿ.ಮೀ., ಮತ್ತು 5 ಕಿ.ಮೀ. ವಿಭಾಗಗಳಲ್ಲಿ ಮ್ಯಾರಥಾನ್ ನಡೆಯಲಿದೆ ಎಂದು ವಿವರಿಸಿದರು.
ಹಾಫ್ ಮ್ಯಾರಥಾನ್ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಲಿದ್ದು, 21 ಕಿ.ಮೀ. ವಿಭಾಗದಲ್ಲಿ ಪ್ರಥಮ ಬಹುಮಾನ 25ಸಾವಿರ ರೂ. ಮತ್ತು ದ್ವಿತೀಯ 15ಸಾವಿರ ರೂ. ನಗದು ಬಹುಮಾನ ನಿಗದಿಯಾಗಿದೆ. 21 ಕಿ.ಮೀ. ಮ್ಯಾರಥಾನ್ ಬೆಳಗ್ಗೆ 5 ಗಂಟೆಗೆ, 10 ಕಿ.ಮೀ. ಮ್ಯಾರಥಾನ್ 5.30ಕ್ಕೆ, ಹಾಗೂ 5 ಕಿ.ಮೀ. ನಡಿಗೆ 6.30ಕ್ಕೆ ಆರಂಭವಾಗಲಿದೆ.
ಮ್ಯಾರಥಾನ್ ಕುದ್ರೋಳಿ ಕ್ಷೇತ್ರದಿಂದ ಆರಂಭವಾಗಿ ನಾರಾಯಣ ಗುರು ಸರ್ಕಲ್, ಚಿಲಿಂಬ, ದೇರೆಬೈಲ್, ಭಾರತ್ ಮಾಲ್, ಮಲ್ಲಿಕಟ್ಟೆ, ಕಂಕನಾಡಿ, ವೆಲೆನ್ಸಿಯಾ, ಮಂಗಳಾದೇವಿ, ಫಾರಂ ಮಾಲ್, ಕ್ಲಾಕ್‌ಟವರ್ ಹಾದು, ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ಕ್ಷೇತ್ರಕ್ಕೆ ಹಿಂತಿರುಗಲಿದೆ.
ಸಿ ಟಿವಿ ಕನ್ನಡಕ್ಕೆ ಸ್ವಾಗತ. ಪ್ರಿಯ ವೀಕ್ಷಕರೆ, ಇದೀಗ ಸಿಟಿವಿ ಕನ್ನಡ ವೆಬ್ ಸೈಟ್ ನಲ್ಲೂ ಲಭ್ಯವಿದೆ. ಪ್ರತಿ ಕ್ಷಣದ ತಾಜಾ ಸುದ್ದಿಗಳನ್ನು ಓದಲು ಸಿ ಟಿವಿ ಕನ್ನಡ ವೆಬ್ ಸೈಟ್ ಸಂಪರ್ಕ ಮಾಡಬಹುದು. ರಾಜಕೀಯ, ಕ್ರೀಡೆ ಹಾಗೂ ಸಾಂಸ್ಕೃತಿಕ ವರದಿಗಳು ಸೇರಿದಂತೆ ಅನೇಕ ವಿಷಯಗಳನ್ನೊಳಗೊಂಡ ವಿಚಾರ ಮಂಟಪವಾಗಿ ನಿಮಗೀಗ ಸಿ ಟಿವಿ ವೆಬ್ ನ್ಯೂಸ್ ಓದಲು ಮುಕ್ತವಾಗಿದೆ. ವಿಶೇಷ ವರದಿಗಳನ್ನು ವೀಕ್ಷಿಸಲು ಕೇಬಲ್ ನೆಟ್ವರ್ಕ್ ನಲ್ಲಿ ಲಭ್ಯವಿದೆ. ಕೇಬಲ್ ನಂಬರ್ 92 ರಲ್ಲಿ "ಸಿ ಟಿವಿ ಕನ್ನಡ" ಚಾನಲ್ ನ್ನು ವೀಕ್ಷಿಸಬಹುದು.
0 ಕಾಮೆಂಟ್‌ಗಳು