ರಾತ್ರಿ ಮಲಗಿರುವ ವೇಳೆ ಮಹಿಳೆಯೋರ್ವರಿಗೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿರುವ ಘಟನೆ ಕಲ್ಪನೆಯ ದರ್ಖಾಸಿನಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಕಲ್ಪನೆಯ ದರ್ಖಾಸು ಎಂಬಲ್ಲಿ ಜಯಭಾರತಿ ಎಂಬವರ ಮೇಲೆ ಅವರ ಭಾವ ಶಂಕರ ಎಂಬಾತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಮಹಿಳೆ ಬೆಂಕಿಯ ಕಿನ್ನಾಲೆಗೆ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ.
ರಾತ್ರಿ ಮಲಗಿರುವ ವೇಳೆ ಈ ಘಟನೆ ನಡೆದಿದ್ದು ಕೂಡಲೆ ಅಕ್ಕ ಪಕ್ಕದ ಮನೆಯವರು ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಕೂಡಲೆ ಗಾಯಗೊಂಡ ಮಹಿಳೆಯನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಏಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬೆಂಕಿ ಹಚ್ಚಿದ ಶಂಕರ್ ಎಂಬಾತನಿಗೂ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಿಲಾಗಿದೆ. ಸ್ಥಳಕ್ಕೆ ಬೆಳ್ಳಾರೆ ಠಾಣಾ ಪೋಲಿಸರು ಭೇಟಿ ನೀಡಿದ್ದು ಯಾವ ವಿಷಯಕ್ಕಾಗಿ ಈ ಘಟನೆ ನಡೆದಿದೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
0 ಕಾಮೆಂಟ್‌ಗಳು