ಸುಳ್ಯ: ರಾತ್ರಿ ಮಲಗಿರುವ ವೇಳೆ ಮಹಿಳೆಯೋರ್ವರಿಗೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿರುವ ಘಟನೆ ಕಳೆದ ಕೆಲವು ದಿನಗಳ ಹಿಂದಿಯಷ್ಟೆ ಕಲ್ಪನೆಯ ದರ್ಖಾಸಿನಲ್ಲಿ ನಡೆದಿದ್ದು ಚಿಕಿತ್ಸೆ ಫಲಿಸದೆ ಮಹಿಳೆ ನಿನ್ನೆ ಸಾವನ್ನಪ್ಪಿದ್ದಾರೆ.
ಜಯಭಾರತಿ ಎಂಬವರ ಮೇಲೆ ಅವರ ಭಾವ ಶಂಕರ ಎಂಬಾತ ರಾತ್ರಿ ವೇಳೆ ಕಿಟಕಿ ಮೂಲಕ ಮಹಿಳೆ ಮಲಗಿರುವ ರೂಮಿನೊಳಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದನು. ಮಹಿಳೆ ಬೆಂಕಿಯ ಕಿನ್ನಾಲೆಗೆ ಸಿಲುಕಿ ಗಂಭೀರ ಗಾಯಗೊಂಡು ರಾತೋರಾತ್ರಿ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
75% ದೇಹ ಸುಟ್ಟು ಹೋಗಿರುವ ಕಾರಣ ಮಹಿಳೆ ಮತ್ತೆ ಚೇತರಿಸಿಕೊಳ್ಳುವುದು ಬಹಳ ಕಷ್ಟ ಎನ್ನಲಾಗಿತ್ತು. ನಿನ್ನೆ ಆ. 23 ರಂದು ಮಹಿಳೆ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.
0 ಕಾಮೆಂಟ್‌ಗಳು