ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲೊಂದಾದ ಶಕ್ತಿ ಯೋಜನೆ ಶಕ್ತಿ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆಯಾ ಎಂಬ ಅನುಮಾನ ಮೂಡಲಾರಂಭಿಸಿದೆ.
ಅಧಿಕಾರಕ್ಕೇರಲು ಕಳೆದ ಬಾರಿ ಕಾಂಗ್ರೇಸ್ ಅನೇಕ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅದನ್ನು ಹಂತ ಹಂತವಾಗಿ ಜಾರಿಗೊಳಿಸಿ ನಾವು ನುಡಿದಂತೆ ನಡೆದಿದ್ದೇವೆ ಎಂದು ಬೆನ್ನು ತಟ್ಟಿಕೊಂಡಿತ್ತು.
ಅದರಲ್ಲೂ ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ (ಶಕ್ತಿ ಯೋಜನೆ) ಯನ್ನು ತಕ್ಷಣವೆ ಜಾರಿಗೊಳಿಸಿತ್ತು. ಇದೀಗ ಶಕ್ತಿ ಯೋಜನೆಯನ್ನು ನಿಲ್ಲಿಸಲು ಸರಕಾರ ಮುಂದಾಗುತ್ತಿದೆ ಎಂಬ ಸೂಚನೆ ಸಿಕ್ಕಂತಾಗಿದೆ. ಈ ಕುರಿತು ಸೂಚನೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವ ಕುಮಾರ್ ರವರು ಶಕ್ತಿ ಯೋಜನೆಯನ್ನು ಮುಂದುವರಿಸುವ ಕುರಿತು ಮುಂದಿನ ದಿನಗಳನ್ನು ತೀರ್ಮಾಣಿಸಲಾಗುವುದು, ಮಹಿಳೆಯರು ಹಣ ಪಾವತಿಸಿ ಟಿಕೇಟ್ ಪಡೆಯಲು ಬಯಸಿದ್ದಾರೆ ಹಾಗಾಗಿ ಶಕ್ತಿ ಯೋಜನೆಯನ್ನು ಮುಂದುವರಿಸಬೇಕೊ, ಬೇಡವೆ ಎಂಬುದನ್ನು ತೀರ್ಮಾಣಿಸುವ ಹಂತಕ್ಕೆ ಬಂದಿದ್ದೇವೆ ಎಂಬ ಸೂಚನೆ ನೀಡಿದ್ದಾರೆ.
0 ಕಾಮೆಂಟ್‌ಗಳು