ರಾಜಕೀಯದಲ್ಲಿ ಎರಡು ಬಾರಿ ಸೋಲಿನ ರುಚಿ ಕಂಡ ನಿಖೀಲ್ ಕುಮಾರಸ್ವಾಮಿ
ಈ ಬಾರೀ ಬಹಳ ಪ್ರಭುದ್ವವಾಗಿ ಪ್ರಚಾರ ಮಾಡಿ ಗೆಲುವಿನ ಮಾಲೆ ತೊಡಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಸೈನಿಕ ಎದುರು ತೊಡೆ ತಟ್ಟಿ ಪ್ರಚಾರಕ್ಕೆ ದುಮುಕಿದ ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡರು ನಿಖೀಲ್ ಕುಮಾರಸ್ವಾಮಿಗಿಂತ ಸ್ವತಃ ನಾನೇ ಅಭ್ಯಾರ್ಥಿ ಎನ್ನುವ ಉತ್ಸಾಹದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊಮ್ಮಗನನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಇನ್ನು ಬಿಜೆಪಿಯಿಂದ ಕಾಂಗ್ರೇಸ್ ಗೆ ಹಾರಿದ ಸಿಪಿ ಯೋಗಿಶ್ವರ್ ನಿಖೀಲ್ ಕುಮಾರಸ್ವಾಮಿಯವರ ಎದುರು ಸ್ಪರ್ಧಿಸಿದ್ದಾರೆ. ಹಾಗಂತ ಸಿಪಿ ಯೋಗಿಶ್ವರ್ ರವರ ಗೆಲುವು ಈ ಬಾರಿ ಅಂದುಕೊಂಡಷ್ಟು ಸುಲಭವಲ್ಲ, ಚನ್ನಪಟ್ಟಣ ಕ್ಷೇತ್ರದಲ್ಲಿ ಈ ಬಾರಿ ನಿಖೀಲ್ ಕುಮಾರಸ್ವಾಮಿಯರವ ಮೇಲೆ ಮತದಾರರು ಹೆಚ್ಚಿನ ಒಲವು ತೋರಿಸಿದ್ದಾರೆ. ಹಾಗಾಗಿ ಎರಡು ಬಾರಿ ಸೋಲು ಕಂಡ ನಿಖೀಲ್ ಕುಮಾರಸ್ವಾಮಿಗೆ ಮೂರನೇ ಬಾರಿ ಗೆಲುವಾಗಿ ಮಾರ್ಪಡಗುತ್ತಾ ಎಂಬುದನ್ನು ಚುಣಾವಣ ಫಲಿತಾಂಶ ಹೊರಬರುವ ವರೆಗೂ ಕಾದುನೋಡಬೇಕಿದೆ.
0 ಕಾಮೆಂಟ್‌ಗಳು