ಕೆಯ್ಯೂರಿನಲ್ಲಿ ಚಡ್ಡಿಗ್ಯಾಂಗ್ ಕಥೆ ಕಟ್ಟಿದ ಕೇರಳದ ಮಹಿಳೆ‌

 ಮಲಯಾಲಂನ ಮನೋರಮಾ ನ್ಯೂಸ್ ಚಾನಲ್ ನಲ್ಲಿ ಬಂದಿರುವ ಪೋಟೊವೊಂದನ್ನು ಬಳಸಿ  ಚಡ್ಡಿ ಗ್ಯಾಂಗ್  ಕಥೆ ಕಟ್ಟಿದ ಕೇರಳ ಮೂಲದ ಮಾರ್ಗರೇಟ್. ರಬ್ಬರ್ ಟಾಪಿಂಗ್ ಕೆಲಸ ಮಾಡುವ ಇವಳು ಸಿನಿಮಾವನ್ನು ಮೀರಿಸುವ ಕಥೆ ಬರೆಯಲು ಹೊರಟಿದ್ದಾಳ ಎಂಬಂತಾಗಿದೆ. 



ನಮ್ಮ ಮನೆಗೆ ಚಡ್ಡಿ ಗ್ಯಾಂಗ್ ವೊಂದು ಬಂದಿದ್ದು ಹಣ, ಒಡವೆ ಕೇಳಿದ್ದಾರೆಂದು ಪ್ರಚಾರ ಮಾಡಿದ್ದಲ್ಲದೆ ಬೆದರಿಕೆ ಹಾಕಿದ್ದಾರೆಂದು ಸಹ ಕಥೆ ಕಟ್ಟಿದ್ದಾಳೆ. ಅವಳ ಕಥೆಯ ಸಾರಂಶಕ್ಕೆ ಇಡೀ ಕೆಯ್ಯೂರಿನ ಜನತೆಗೆ ಬೆಚ್ಚಿ ಬಿದ್ದಿದ್ದರು. 


ರಾತ್ರಿ ಸುಮಾರು 9 ಗಂಟೆ ವೇಳೆಗೆ ನಮ್ಮ ಮನೆಗೆ ಮಾಸ್ಕ್ ಧರಿಸಿ ಚಡ್ಡಿ ಗ್ಯಾಂಗ್ ಬಂದಿದ್ದು ಹಣ, ಒಡವೆ ಕೇಳಿದ್ದಾರೆ, ನಾನು ಬಾಗಿಲು ಮುಚ್ಚಿದೆ ಅವರು ಬಂದಿರುವ ಪೋಟೊವನ್ನು ನಾನು ಮನೆಯ ಕಿಟಕಿಯ ಮೂಲಕ ಕ್ಲಿಕ್ಕಿಸಿದ್ದೇನೆಂದು ಹೇಳಿದ್ದಳು.



ಈ ಸುದ್ದಿ ಇಂದು ಊರೆಲ್ಲ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಪೋಲಿಸರು ಆಗಮಿಸಿ ಪೋಟೊ ಕ್ಲಿಕ್ಕಿಸಿರುವ ಮೊಬೈಲ್ ನ್ನು ಪರಿಶೀಲಿಸಿದಾಗ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ. ಕೇರಳದ ಮಲಯಾಲಂ ಮನೋರಮಾ ಚಾನಲ್ ನಲ್ಲಿ ಎರಡು ವರ್ಷಗಳ ಹಿಂದೆ ಪ್ರಸಾರವಾದ ಪೋಟೊವೊಂದನ್ನು ಬಳಸಿ ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಕಥೆ ಕಟ್ಟಿದ್ದಾಳೆನ್ನಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು