ಪುತ್ತೂರಿನಲ್ಲೊಂದು ಅವಮಾನವೀಯ ಘಟನೆ

 



ಗಾರೆ ಕೆಲಸ ಮಾಡುವ ಕೂಲಿ ಕಾರ್ಮಿಕನ ಶವವನ್ನು ಅವನ ಮನೆಯ ರಸ್ತೆ ಬದಿಯಲ್ಲಿ ಮಲಗಿಸಿ ಹೋದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಚಿಕ್ಕಮೂಡ್ನೂರಿನ ಸಾಲ್ಮರದ ಕರೆಮೂಲೆಯಲ್ಲಿ ಇಂದು ನ. 16 ರಂದು ಇಂತಹ ಅವಮಾನವೀಯ ಘಟನೆ ನಡೆದಿದ್ದು ಸ್ಥಳಿಯರು ಕಾಮಗಾರಿ ನಡೆಸುತ್ತಿದ್ದವರ ವಿರುದ್ದ ಆಕ್ರೋಶ ಹಿರಹಾಕಿದ್ದಾರೆ.

70 ವರ್ಷ ಪ್ರಾಯದ ಶಿವಪ್ಪ ಎಂಬವರು ಗಾರೆ ಕೆಲಸ ಮಾಡುವ ಮೇಸ್ತ್ರಿಯೊಬ್ಬರೊಂದಿಗೆ ಸಹಾಯಕರಾಗಿ ದುಡಿಯುತ್ತಿದ್ದರು. ಇಂದು ಕೆಲಸ ಮಾಡುತ್ತಿದ್ದ ವೇಳೆ ಮೃತ ಪಟ್ಟಿದ್ದು ಶಿವಪ್ಪರವರ ಶವವನ್ನು ಪಿಕಾಪ್ ಮೂಲಕ ಅವರ ಮನೆಯ ಪಕ್ಕದ ರಸ್ತೆಗೆ ತಂದು ಮಲಗಿಸಿ ಹೋಗಿರುವುದಾಗಿ ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು