ಕಾಂತರ ತಂಡಕ್ಕೆ ಮತ್ತೊಂದು ವಿಘ್ನ ಎದುರಾಗಿದ್ದು, ತಂಡದ ವಾಹನ ಅಪಘಾತವಾಗಿ ಮೂವರ ಸ್ಥಿತಿ ಗಂಭೀರ ಎನ್ನಲಾಗುತ್ತಿದೆ.
ದಂತಕಥೆಯ ಮಣ್ಣಲ್ಲಿ ಕಾಂತಾರ ಸಿನಿಮಾ ಮೂಲಕ ಕರಾವಳಿ ಜಿಲ್ಲೆಯಲ್ಲಿನ ದೈವರಾಧನೆಯ ದಂತಕಥೆಯ ಚರಿತ್ರೆ ಬರೆದ ರಿಷಬ್ ಶೆಟ್ಟಿ ರವರ ಕಾಂತಾರ ಸಿನಿಮಾಕ್ಕೆ ಒಂದರ ಮೇಲೊಂದು ವಿಘ್ನ ಎದುರಾಗುತ್ತಿದೆ.
ಕಾಂತಾರ ಸಿನಿಮಾದ ಮುಂದುವರಿದ ಭಾಗದ ಶೂಟಿಂಗಾಗಿ ಕೊಲ್ಲೂರು, ಕುಂದಾಪುರದಲ್ಲಿ ಅದ್ದೂರಿ ಸೆಟ್ಟ್ ಹಾಕಲಾಗಿತ್ತು. ಸಿನಿಮಾದ ಡ್ಯಾನ್ಸ್ ಗಾಗಿ ನೃತ್ಯ ತಂಡವನ್ನು ಕರೆಸಿಕೊಳ್ಳಲಾಗಿದ್ದು, ಇದಕ್ಕಾಗಿ ಉಡುಪಿ ಟ್ರಾವೇಲ್ಸ್ ವಾಹನವನ್ನು ಬಳಸಲಾಗಿತ್ತು. ಚಾಲಕನ ನಿರ್ಲಕ್ಷ್ಯದಿಂದ ಉಡುಪಿ ಟ್ರಾವೆಲ್ಸ್ ವಾಹನ ಪಲ್ಟಿಯಾಗಿ ತಂಡದ ಸದಸ್ಯರಿಗೆ ಗಾಯಗಳಾಗಿವೆ, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ತಿಂಗಳ ಹಿಂದೆ ಸಂಭಾವನೆ ವಿಷಯದಲ್ಲಿ ಗಲಾಟೆ ನಡೆದಿತ್ತು,
ಇದೀಗ ಮತ್ತೊಂದು ವಿಘ್ನ ಸುತ್ತಿಕೊಂಡಿದೆ,
ಇದರ ಬಗ್ಗೆ ಕಾಂತಾರ ಸಿನಿಮಾ ಆಗಲಿ, ಹೊಂಬಾಲೆಯಾಗಲಿ ಯಾವುದೆ ಮಾಹಿತಿ ನೀಡಿಲ್ಲ.
0 ಕಾಮೆಂಟ್‌ಗಳು