ರೋಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಮಕ್ಕಳ ದಿನಾಚರಣೆ ಕಿಟ್ ಹಾಗೂ ಪಾದರಕ್ಷೆ ವಿತರಣೆ

 


ಪುತ್ತೂರು: ರೆಂಜಲಾಡಿ ಅಂಗನವಾಡಿ ಕೇಂದ್ರದಲ್ಲಿ ರೋಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ನ. 27 ರಂದು ವಿವಿಧ ಆಟೋಟ ಸ್ಪರ್ಧೆ ಆಯೋಜಿಸಿ ಬಹುಮಾನ ಹಾಗೂ ಎಲ್ಲಾ ಪುಟಾಣಿಗಳಿಗೆ  ಡ್ರಾಯಿಂಗ್ ಕಿಟ್ ಮತ್ತು ಪಾದರಕ್ಷೆಗಳನ್ನು ವಿತರಿಸಲಾಯಿತು. 



ಕಿಟ್ ನ ಪ್ರಾಯೋಜಕತ್ವವನ್ನು ರೋ. ಹಿಮಾಂಶು, ರೋ. ನವೀನ್ ಚಂದ್ರ, ರೋ. ಸುಶಾಂತ್,ರೋ. ಪುರುಷೋತ್ತಮ್, ರೋ. ನವ್ಯ ಮತ್ತು ರೋ. ಮಹೇಶ್ ಚಂದ್ರ ವಹಿಸಿಕೊಂಡರು.

ಪಾದುಕೆಗಳ ಪ್ರಾಯೋಜಕತ್ವವನ್ನು ರೋಟರಿ ಕ್ಲಬ್ ಪುತ್ತೂರು ಇದರ ಖಜಾಂಜಿ ರೊ. ಎಂ ಜಿ ರಫೀಕ್ ವಹಿಸಿದ್ದು, ಪಾದರಕ್ಷೆ ವಿತರಣೆ ರೋಟರಾಕ್ಟ್ ಕ್ಲಬ್ ನ 2024-25 ನೇ ಸಾಲಿನ ವಾರ್ಷಿಕ ಯೋಜನೆಗಳಲ್ಲೊಂದಾಗಿದೆ. 


ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷ ರೋ. ಪಿ ವಿ ಸುಬ್ರಮಣಿ, ಎಸ್ ಡಿ ಎಂ ಸಿ ಅಧ್ಯಕ್ಷ ಹಮೀದ್, ಅಂಗನವಾಡಿ ಕಾರ್ಯಕರ್ತೆ ಪುಷ್ಪ, ಆಶಾ ಕಾರ್ಯಕರ್ತೆ ರಾಜೀವಿ ಹಾಗೂ ಕ್ಲಬ್ ನ ಕಾರ್ಯದರ್ಶಿ ರೋ. ವಿಶಾಲ್ ಎ, ಮಾಜಿ ವಲಯ ಪ್ರತಿನಿಧಿ ರೋ. ನವೀನ್ ಚಂದ್ರ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ರೋ. ಎಡ್ವರ್ಡ್, ಪದಾಧಿಕಾರಿಗಳಾದ ರೋ. ನವನೀತ್, ರೋ. ಹರ್ಷಿತ್, ರೋ.ಸುಶಾಂತ್, ರೋ. ಶಶಿಧರ್ ಹಾಗೂ ಮಕ್ಕಳ ಹೆತ್ತವರು ಪೋಷಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು