ಪುತ್ತೂರು: ಪೊಲೀಸ್ ಠಾಣೆಗೆ ದೂರು ಕೊಡಲು ಬರುವ ಮಂದಿಯನ್ನು ಗೌರವದಿಂದ ಕಾಣಬೇಕು ಮತ್ತು ಅವರಿಗೆ ಠಾಣೆಯಲ್ಲೇ ಚಾ,ತಿಂಡಿಯನ್ನು ಕೊಡಬೇಕು ಇದಕ್ಕಾಗಿ ಪ್ರತೀ ಠಾಣೆಗೂ ಒಂದು ಲಕ್ಷ ವಿಶೇಷ ಅನುದಾನವನ್ನು ಗೃಹ ಇಲಾಖೆ ನೀಡಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ಮಂಗಳೂರಿನಲ್ಲಿ ನಡೆದ ಪೊಲೀಸ್ ವಸತಿಗೃಹ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿಮಾತನಾಡಿದ ಸಚಿವರು ಪ್ರತೀ ಪೊಲೀಸ್ ಮತ್ತುಠಾಣೆಗಳುಜನಸ್ನೇಹಿಯಾಗಬೇಕು. ಠಾಣೆಗೆ ದೂರು ಕೊಡಲು ಬರುವ ಮಂದಿ ಜೊತೆ ಗೌರವದಭಾಷೆಯಲ್ಲಿ ಮಾತನಾಡಿ ಅವರನ್ನು ಉಪಚರಿಸಬೇಕು .ಎಲ್ಲಾ ಠಾಣೆಗಳಲ್ಲೂ ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ಸಿ ಸಿ ಕೆಮರಾ ಅಳವಡಿಸಲಾಗುವುದು ಎಂದುಸಚಿವರು ಹೇಳಿದರು.
0 ಕಾಮೆಂಟ್‌ಗಳು