ಪುತ್ತೂರಿನ ಕೆಯ್ಯೂರಿನಲ್ಲಿ ನಿನ್ನೆ ರಾತ್ರಿ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿದ್ದು ಮನೆಯೊಂದಕ್ಕೆ ತೆರಲಿ ಹಣ, ಒಡವೆ ನೀಡುವಂತೆ ಬೆದರಿಸಿದ್ದಾರೆ.
ಮಂಗಳೂರಿನಲ್ಲಿ ಸದ್ದು ಮಾಡಿದ್ದ ಚಡ್ಡಿ ಗ್ಯಾಂಗ್ ಇದೀಗ ಪುತ್ತೂರಿನ ಕೆಯ್ಯೂರಿಗೂ ತಲುಪಿದೆಯಾ ಎಂಬ ಆತಂಕ, ಭಯ ಜನರಲ್ಲಿ ಮೂಡಿದೆ.
ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕೆಯ್ಯೂರಿನ ಸಣಂಗಳದಲ್ಲಿರುವ ಮನೆಯೊಂದಕ್ಕೆ ತೆರಲಿದ ಚಡ್ಡಿ ಗ್ಯಾಂಗ್ ಮುಖಕ್ಕೆ ಮಾಸ್ಕ್ ಧರಿಸಿ ಮನೆಯವರಲ್ಲಿ ಹಣ, ಒಡವೆ ನೀಡುವಂತೆ ಬೆದರಿಸಿದ್ದಾರೆ.
ಭಯಗೊಂಡ ಮನೆಯವರು ಬಾಗಿಲು ಮುಚ್ಚಿ ಕಿಟಕಿಯ ಮೂಲಕ ಚಡ್ಡಿ ಗ್ಯಾಂಗ್ ನ ಪೋಟೊ ಕ್ಲಿಕ್ಕಿಸಿದ್ದಾರೆ. ಮನೆಯೊಳಗೆ ಹೆಚ್ಚು ಜನರು ಇರುವುದನ್ನರಿತ ಗ್ಯಾಂಗ್ ಕೂಡಲೆ ಎಸ್ಕೇಪ್ ಆಗಿದ್ದಾರೆನ್ನಲಾಗಿದೆ.
0 ಕಾಮೆಂಟ್‌ಗಳು