ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಸಂಸದರು ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಪ್ರಮುಖ ಬೇಡಿಕೆಗಳನ್ನು ಪ್ರಸ್ತಾಪಿಸಿದರು. ಸಚಿವರು ಈ ಬಗೆಗೆ ಗಮನ ಸೆಳೆದಿದ್ದು, ತಕ್ಷಣವೇ ಅಧಿಕಾರಿಗಳಿಗೆ ಅಗತ್ಯವಾದ ಸೂಚನೆಗಳನ್ನು ನೀಡಿದರು.
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದಕ್ಷಿಣ ಕನ್ನಡ ಸಂಸದ ಕಾಪ್ಟನ್ ಬ್ರಿಜೇಶ್ ಚೌಟ ಅವರು ಸಚಿವರನ್ನು ಭೇಟಿಯಾಗಿ ಕರಾವಳಿ ಭಾಗದ ರೈಲು ಸೇವೆಗಳ ಅಭಿವೃದ್ಧಿಯ ಕುರಿತು ಚರ್ಚಿಸಿದರು. ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ಈ ಭಾಗದ ಜನರಿಗೆ ಉತ್ತಮ ರೈಲು ಸಂಚಾರವನ್ನು ಒದಗಿಸುವ ಕುರಿತು ಬೇರಷ್ಟು ಬೇಡಿಕೆಗಳ ಬಗ್ಗೆ ವಿವರವಾದ ಮಾತುಕತೆ ನಡೆಸಲಾಯಿತು.
0 ಕಾಮೆಂಟ್‌ಗಳು