ಬೆಳ್ಳಾರೆಯ ಹೋಟೆಲೊಂದರಲ್ಲಿ ಗ್ಯಾಸ್ ಸ್ಟವ್ ನಿಂದ ಆಕಸ್ಮಿಕ ಬೆಂಕಿ ಉರಿದುಕೊಂಡಿರುವ ಘಟನೆ ಇಂದು ನಡೆದಿದೆ.
ಬೆಳ್ಳಾರೆ ಮುಖ್ಯ ರಸ್ತೆಯಲ್ಲಿರುವ ತೃಪ್ತಿ ಹೋಟೆಲ್ ನಲ್ಲಿ ಈ ಘಟನೆ ಸಂಭವಿಸಿದ್ದು ಗ್ಯಾಸ್ ಸ್ಟವ್ ನಿಂದ ಆಕಸ್ಮಿಕ ಬೆಂಕಿ ತಗುಲಿರುವ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಪ್ರಿಡ್ಜ್ ಸಂಪೂರ್ಣ ಭಸ್ಮವಾಗಿದೆ. ಪ್ರಿಡ್ಜ್ ಮೇಲಿದ್ದ ಎರಡು ಮೊಬೈಲ್ ಪೋನ್, ಹಾಗೂ ಇನ್ನಿತರ ವಸ್ತುಗಳು ಸುಟ್ಟು ಹೋಗಿವೆ.
0 ಕಾಮೆಂಟ್‌ಗಳು