ಟೈಗರ್ ಶ್ರಾಫ್ ಚಿತ್ರದ ಖಡಕ್ ಪೋಸ್ಟರ್ ರಿಲೀಸ್, ಬಾಲಿವುಡ್ನಲ್ಲಿ ‘ಭಜರಂಗಿ’ ಹರ್ಷ

ನಿರ್ದೇಶಕ ಎ.ಹರ್ಷ ಅವರು ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಶಿವರಾಜ್ಕುಮಾರ್ ಜೊತೆ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಈಗ ಅವರು ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಅಲ್ಲಿ ಸಿನಿಮಾ ಮಾಡುವ ಕಮಿಟ್ಮೆಂಟ್ ತೆಗೆದುಕೊಂಡಿದ್ದಾರೆ. ಟೈಗರ್ ಶ್ರಾಫ್ ನಟನೆಯ ‘ಬಾಘಿ 4’ ಚಿತ್ರಕ್ಕೆ ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ.


ಬಾಲಿವುಡ್ನ ಯಶಸ್ವಿ ಫ್ರಾಂಚೈಸ್ಗಳಲ್ಲಿ ‘ಬಾಘಿ’ ಕೂಡ ಒಂದು. ಈ ಸರಣಿಯಲ್ಲಿ ಮೊದಲೆರಡು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದರೆ, ‘ಬಾಘಿ 3 ವಿಮರ್ಶೆಯಲ್ಲಿ ಸೋತಿತ್ತು. ಆದರೆ ಗಳಿಕೆ ಉತ್ತಮವಾಗಿಯೇ ಆಗಿತ್ತು. ಈಗ ಇದೇ ಹುಮ್ಮಸ್ಸಲ್ಲಿ ಸಾಜಿದ್ ನಾಡಿಯಾದ್ವಾಲಾ ಅವರು ಈ ಸರಣಿಯಲ್ಲಿ ನಾಲ್ಕನೇ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಹರ್ಷ ಅವರ ನಿರ್ದೇಶನ ಇರಲಿದೆ ಅನ್ನೋದು ವಿಶೇಷ.

2007ರಲ್ಲಿ ರಿಲೀಸ್ ಆದ ‘ಗೆಳೆಯ’ ಸಿನಿಮಾ ಮೂಲಕ ನಿರ್ದೇಶನ ಆರಂಭಿಸಿದವರು ಹರ್ಷ. ಆ ಬಳಿಕ ‘ಬಿರುಗಾಳಿ’, ‘ಚಿಂಗಾರಿ’, ರೀತಿಯ ಚಿತ್ರ ಮಾಡಿದರು. 2013ರಲ್ಲಿ ಶಿವರಾಜ್ಕುಮಾರ್ ಜೊತೆ ‘ಭಜರಂಗಿ’ ಸಿನಿಮಾ ಮಾಡಿ ದೊಡ್ಡ ಗೆಲುವು ಕಂಡರು. ‘ವಜ್ರಕಾಯ’, ‘ಅಂಜನೀ ಪುತ್ರ’, ‘ಭಜರಂಗಿ 2’, ‘ವೇದ’ ರೀತಿಯ ಸಿನಿಮಾನ ಅವರು ನಿರ್ದೇಶನ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು