ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ವೇಣುರಿನಲ್ಲಿ ಇಂದು ಸಂಜೆ ನಡೆದಿದೆ.
ವೇಣೂರಿನಲ್ಲಿರುವ ಸಂಬಂಧಿಕರ ಮನೆಗೆ ಸಾಂತ್ ಮಾರಿ ಹಬ್ಬಕ್ಕೆ ಬಂದಿದ್ದರು, ಅಲ್ಲಿಂದ ಅವರು ವೇಣುರಿನ ನಿಟ್ಟಾಡೆ ಗ್ರಾಮದ ನರ್ತಿಕಲ್ಲು ಪಾಲ್ಗುಣಿ ನದಿಯತ್ತ ತೆರಳಿ ಮೂವರು ಯುವಕರು ಸ್ನಾನ ಮಾಡಲು ಇಳಿದಿದ್ದರು, ಈ ವೇಳೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ಪಟ್ಟವರನ್ನು ಮಡಂತ್ಯಾರು ನಿವಾಸಿ ಸೂರಾಜ್, ಜೈಸನ್, ಲಾರೆನ್ಸ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಪ್ರಾಣಪಾಯದಿಂದ ಪಾರಾಗಿದ್ದು, ಮೃತ ಪಟ್ಟವರನ್ನು ವಗ್ಗ, ಮಡಂತ್ಯಾರು ಹಾಗೂ ಎಡಪದವಿನವರು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ವೇಣೂರು ಠಾಣೆಯ ಪೋಲಿಸರು ಭೇಟಿ ನೀಡಿದ್ದಾರೆ.
0 ಕಾಮೆಂಟ್‌ಗಳು