ಪುತ್ತೂರಿನಲ್ಲಾದ ಅವಮಾನವೀಯ ಘಟನೆಗೆ ಎಚ್ಚೆತ್ತ ಸಂಘಟನೆ

 


ಕೂಲಿ ಕಾರ್ಮಿಕ ಶವವನ್ನು ಅವರ ಮನೆಯ ರಸ್ತೆ ಬದಿಯಲ್ಲಿ ಮಲಗಿಸಿ ಹೋದ ಘಟನೆ ನಿನ್ನೆ ಪುತ್ತೂರಿನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸ ಇದೀಗ ಸಂಘಟನೆಗಳು ಪುತ್ತೂರು ಪೋಲಿಸ್ ಠಾಣೆಯ ಎದುರು ಜಮಾಯಿಸಿದ್ದಾರೆ.


ಚಿಕ್ಕಮೂಡ್ನೂರಿನ ಸಾಲ್ಮರದ ಕರೆಮೂಲೆಯ ನಿವಾಸಿ ಶಿವಪ್ಪ 70, ನಿನ್ನೆ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದರು. ಅವರ ಶವವನ್ನು 

ಪಿಕಾಪ್ ಮೂಲಕ ಅವರ ಮನೆಯ ಪಕ್ಕದ ರಸ್ತೆಗೆ ತಂದು ಮಲಗಿಸಿ ಹೋಗಿರುವುದು ಬೆಳಕಿಗೆ ಬಂದಿತ್ತು. 


ಈ ಅವಮಾನವೀಯ ಘಟನೆಗೆ ಇದೀಗ ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಪುತ್ತೂರು ಠಾಣೆಯ ಮುಂಭಾಗ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದಾರೆ‌. 



ಶವವನ್ನು ತಂದಿರುವ ಪಿಕಾಪ್ ವಾಹನವನ್ನು ಸಹ ಇಗೀದ ಪೋಲಿಸರು ಜಪ್ತಿ ಮಾಡಿರುವ ವಿಚಾರವೂ ತಿಳಿದುಬಂದಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು