ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕರಿಸಿದ್ದ ಅಬೂಬಕ್ಕರ್ ಸಿದ್ದೀಕ್ ನ ಹೆಂಡತಿ ಮನೆಗೆ ಇಂದು ಎನ್ ಐ ಎ ದಾಳಿ ನಡೆಸಿದ್ದಾರೆ.
ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿರುವ ಅವನ ಪತ್ನಿ ಮನೆಗೆ ಎನ್ ಐ ಎ ತಂಡ ದಾಳಿ ಮಾಡಿದ್ದು , ಇದೇ ವೇಳೆ ಬೆಳ್ತಂಗಡಿಯಲ್ಲೂ ನೌಶಾದ್ ಎಂಬಾತನ ಮನೆಗೂ ಅಧಿಕಾರಿಗಳು ದಾಳಿ ಮಾಡಿದ್ದಾರೆನ್ನಲಾಗಿದೆ.
ಒಟ್ಟು 16 ಕಡೆ ಏಕಕಾಲದಲ್ಲಿ ಎನ್ ಐ ಎ ತಂಡ ದಾಳಿ ಮಾಡಿ ಶೋಧ ನಡೆಸಲಾಗಿದೆ ಎಂದು ವರದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 19 ಆರೋಪಿಗಳ ಬಂಧನ ಕೂಡಾ ಆಗಿದೆ. ಇದೀಗ ತನಿಖೆಯ ಮುಂದುವರಿದ ಭಾಗವಾಗಿ ಎನ್ಐಎ ಇಂದು ರಾಜ್ಯದ 16 ಕಡೆಗಳಲ್ಲಿ ದಾಳಿ ನಡೆಸಿದೆ.
0 ಕಾಮೆಂಟ್‌ಗಳು