ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ರವರ ಪಾರ್ಥಿವ ಶರೀರ ಇನ್ನೇನು ಕೆಲವೇ ಕ್ಷಣಗಳಲ್ಲಿ ಹುಟ್ಟೂರಿಗೆ ತಲುಪಲಿದೆ.
ಬೆಂಗಳೂರಿನಿಂದ ಅಂತಿಮ ಯಾತ್ರೆ ಹೊರಟಿದ್ದು ಪಾರ್ಥಿವ ಶರೀರ ಹೊತ್ತು ಸಾಗುತ್ತಿರುವ ಚಿರಶಾಂತಿ ವಾಹನದಲ್ಲಿ ಪಾರ್ಥಿವದ ಪಕ್ಕದಲ್ಲಿಯೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಕುಳಿತು ಆಗಮಿಸುತ್ತಿದ್ದಾರೆ.
ರಸ್ತೆಯುದ್ದಕ್ಕೂ ಪೋಲಿಸ್ ಬಿಗಿಬಂದೋಬಸ್ತ್ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಯಾತ್ರೆ ಹುಟ್ಟೂರಿಗೆ ತಲುಪಲಿದೆ. ಸೋಮನಹಳ್ಳಿಯಲ್ಲಿ ಖಾಕಿ ಏಳು ಸುತ್ತಿನ ಕೋಟೆ ಮಾಡಲಾಗಿದ್ದು ಅಂತಿಮ ವಿಧಿವಿಧಾನ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ ಪೋಲಿಸರನ್ನು ನಿಯೋಜನೆ ಮಾಡಲಾಗಿದೆ.
0 ಕಾಮೆಂಟ್‌ಗಳು