ಶಾಲಾ ಮಕ್ಕಳ ಪ್ರವಾಸದಿಂದಾಗಿ ಮುರುಡೇಶ್ವರ ಬೀಚ್ ನಲ್ಲಿ ನಾಲ್ವರು ವಿದ್ಯಾರ್ಥಿನೀಯರು ಸಾವನ್ನಪ್ಪಿರುವ ಘಟನೆಯನ್ನಾಧರಿಸಿ ಇನ್ನು ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಶಿಕ್ಷಣ ಇಲಾಖೆ ರದ್ದು ಮಾಡಲು ಸೂಚಿಸಿದೆ ಎಂಬ ಸಂದೇಶವೊಂದು ಭಾರೀ ಹರಿದಾಡುತ್ತಿತ್ತು.
ಇದಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದ್ದು ಮುಂದಿನ ದಿನಗಳಲ್ಲಿನ ಅಂದರೆ 2025-26 ನೇ ಸಾಲಿನಿಂದ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ರದ್ದು ಮಾಡಿ ಆದೇಶ ಹೊರಡಿಸಿರುವುದಿಲ್ಲ, 2024-25 ನೇ ಸಾಲಿನಲ್ಲಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದರೆ ಅದನ್ನು ರದ್ದು ಮಾಡಿ ಹಿಂತಿರುಗು ಬರುವಂತೆ ಸೂಚಿಸಿದ್ದೇವೆ ಎಂದು ಸ್ವಪ್ಟಿಕರಣ ನೀಡಿದೆ.
ಮುಂಬರುವ ದಿನಗಳಲ್ಲಿ ಯಾವುದೇ ಅನಾಹುತಗಳು ನಡೆಯದಂತೆ ಎಚ್ಚರ ವಹಿಸಿಕೊಂಡು ಶಾಲಾ ಮಕ್ಕಳ ಪ್ರವಾಸ ಕೈಗೊಳ್ಳಬೇಕು, ಒಂದು ಕಡೆ ಆಗಿರುವ ಘಟನೆಗೂ ಹೋಳಿಕೆ ಮಾಡುವುದು ಸರಿಯಲ್ಲ ಹಾಗಾಗಿ ಪೋಷಕರಲ್ಲಿ ಆತಂಕ, ಭಯ ಉಂಟಾಗುವುದನ್ನು ತಡೆಯಲು ಈ ವರ್ಷದ ಪ್ರವಾಸವನ್ನು ತಕ್ಷಣ ರದ್ದು ಮಾಡಲು ಸೂಚಿಸಿದ್ದೇವೆ ಎಂದು ಸ್ಪಷ್ಟಿಕರಣದಲ್ಲಿ ಉಲ್ಲೇಖಿಸಿದ್ದಾರೆ.
0 ಕಾಮೆಂಟ್‌ಗಳು