ಹೆಣ್ಣು ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸ್ಲೀಲ ಪೋಟೊ, ವೀಡಿಯೋ ಕಳುಹಿಸಿ ತನ್ನೊಂದಿಗೆ ಬಾ ಎಂದು ಆಹ್ವಾನಿಸುತ್ತಿರುವ ಕಾಮುಕರ ಅಟ್ಟಹಾಸ ಜಿಲ್ಲೆಯಲ್ಲಿ ಅತಿಯಾಗಿ ಹೆಚ್ಚಾಗಿ ಕಂಡು ಬರುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳನ್ನು ಪರಿಚಯಿಸಿಕೊಂಡು ಅದರಲ್ಲಿ ಅಸ್ಲೀಲ ಪೋಟೊ, ವೀಡಿಯೊ ರವಾನಿಸಿ ತನ್ನನ್ನು ಭೇಟಿಯಾಗು ಅಥವಾ ನಿನ್ನನ್ನು ನಾನು ಭೇಟಿಯಾಗುತ್ತೇನೆಂದು ಆಹ್ವಾನಿಸಿರುವುದು ದ.ಕ ಜಿಲ್ಲೆಯಲ್ಲಿ ಕಂಡುಬಂದಿದೆ.
ಕಾಮುಕನೊಬ್ಬ ತನ್ನ ಅಸ್ಲೀಲ ಪೋಟೊ, ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರಿಗೆ ಕಳುಹಿಸಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು ಪೋಷಕರು ಪೋಲಿಸರಿಗೆ ದೂರ ನೀಡಲು ಮುಂದಾಗಿದ್ದಾರೆ.
ಶಾಲಾ - ಕಾಲೇಜು ವಿದ್ಯಾರ್ಥಿನೀಯರನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪರಿಚಯಿಸಿಕೊಂಡು ಸುಳ್ಳು ಮಾತುಗಳನ್ನು ಹೇಳಿ ಹುಡುಗಿಯರನ್ನು ನಂಬಿಸಿ, ಕಾಮುಕನ ಕಾಮಪುರಾಣ ಇದೀಗ ವೈರಲ್ ಆಗಿದೆ. ಪೋಷಕರು ಮೊಬೈಲ್ ಪರಿಶೀಲಸಿದಾಗ ತಿಳಿದು ಬಂದಿದೆ. ಸಿಕ್ಕ ಸಿಕ್ಕ ಹುಡುಗಿಯರಿಗೆ ಈ ರೀತಿ ಕಳುಹಿಸಿ ಗುಡ್ಡ ಕಾಡು, ಹಾಗೂ ಲಾಡ್ಜ್ ಗಳಿಗೆ ಬರುವಂತೆ ಒತ್ತಾಯಿಸಿರುವುದು ಮೊಬೈಲ್ ಸಂದೇಶಗಳಿಂದ ತಿಳಿದುಬಂದಿದೆ.
0 ಕಾಮೆಂಟ್‌ಗಳು