ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ರಸ್ತೆಗಳ ಡಾಮರೀಕರಣಮತ್ತು ಪ್ಯಾಚ್ ವರ್ಕ್ ಕಾಮಗಾರಿ ಇಂದು ಆರಂಭಗೊಂಡಿದೆ. ಡಿ.2 ಸೋಮವಾರದಂದೇ ನಗರದ ಎಲ್ಲಾ ರಸ್ತೆಗಳ ಹೊಂಡ ಮುಚ್ಚುವಮತ್ತು ಡಾಮರೀಕರಣ ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ನಗರಸಭಾ ಅಧಿಕಾರಿಗೆ ಆದೇಶವನ್ನು ನೀಡಿದ್ದರು.
ಈ ಬಾರಿಯ ವಿಪರೀತ ಮಳೆಗೆ ನಗರದ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳು ಕೆಟ್ಟು ಹೋಗಿದ್ದವು.ಗ್ರಾಮೀಣ ಭಾಗದ ರಸ್ತೆ ಗಳ ತೇಪೆ ಕಾರ್ಯಕ್ಕೆ ಒಂದು ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪುತ್ತೂರು ನಗರ ಸಭಾ ವ್ಯಾಪ್ತಿಯೊಳಗಿನ ರಸ್ತೆಗಳೂಮಳೆಗೆ ಕೆಟ್ಟು ಹೋಗಿದ್ದು ಈ ರಸ್ತೆ ದುರಸ್ಥಿಮಾಡುವಂತೆಯೂ ಶಾಸಕರುಸೂಚನೆ ನೀಡಿದ್ದರು. ಸೋಮವಾರದಿಂದ ಕಾಮಗಾರಿ ಪ್ರಾರಂಭಗೊಂಡಿದ್ದು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ.
0 ಕಾಮೆಂಟ್‌ಗಳು