ಹುಲಿಚಾಮುಂಡಿ ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರ ದೈವಗಳ ಆರಾಧನಾ ಟ್ರಸ್ಟ್ ರಿಜಿಸ್ಟರ್, ಸಂತೋಷ್ ನಗರ, ಮಾಡಾವು
ಆದೂರು ಮನೆತನದ ಪರವನ್ ಕುಟುಂಬದ ತರವಾಡು ಮನೆಯ
ಧರ್ಮದೈವ ಮತ್ತು ಪರಿವಾರ ದೈವಗಳ ದೈವಸ್ಥಾನದ
ಬ್ರಹ್ಮ ಕಲಶೋತ್ಸವ ಮತ್ತು ನೇಮೊತ್ಸವ ಕಾರ್ಯಕ್ರಮ ನಡೆಯಲಿದೆ.
ದಿನಾಂಕ: 21/12/2024 ರಂದು ಶ್ರೀ ಸತ್ಯ ನಾರಾಯಣ ಪೂಜೆ, ದೈವಗಳಿಗೆ ತಂಬಿಲ ಸೇವೆ, ಹಾಗೂ ಹಸಿರುವಾಣಿ ಹೊರೆಕಾಣಿಕೆ ಸ್ವೀಕಾರ ಹಾಗೂ
22/12/2024 ರಂದು ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪ್ರತಿಷ್ಟೆ ಬ್ರಹ್ಮಕಲಶಾಭೀಷಕ ಮಹಾಪೂಜೆ ಅನ್ನ ಸಂತರ್ಪಣೆ , ಸಂಜೆ 5 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದ ವೇದಿಕೆಯಲ್ಲಿ ಪರಮಪೂಜ್ಯ ಯೋಗಿ ಕೌಸ್ತುಭ ಸತ್ಯರ್ಮ ತಪಸ್ವಿ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ ಸೇರಿದಂತೆ ಗಣ್ಯಾತಿ ಗಣ್ಯರು ಉಪಸ್ಥಿತರಿರಲಿದ್ದಾರೆ. ರಾತ್ರಿ 7 ಗಂಟೆಗೆ ನೇಮೊತ್ಸವ ನಡೆಯಲಿರುವುದು. 23/12/2024 ರಂದು ಧರ್ಮ ದೈವ, ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವವು ನಡೆಯಲಿದೆ.
ಭಗವಾದ್ಭಕ್ತರಾದ ತಾವೆಲ್ಲರೂ ಈ ಪುಣ್ಯ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಮ್ರ ವಿನಂತಿ
ಈ ಎಲ್ಲಾ ಕಾರ್ಯಕ್ರಮ C TV ಯಲ್ಲಿ ನೇರಪ್ರಸಾರವಾಗಲಿದೆ.
0 ಕಾಮೆಂಟ್‌ಗಳು