ಜೋಕಾಲಿಯಲ್ಲಿ ಆಟ ಆಡುತ್ತಿದ್ದಾಗ ಬಾಲಕಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು, ಆದರೆ ಇದೀಗ ಘಟನೆಗೆ ಸಂಬಂಧಿಸಿ ಪೋಲಿಸರು ತನಿಖೆಸುತ್ತಿದ್ದು ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ.
ಜೋಕಾಲಿಯ ಹಗ್ಗ ಕತ್ತುಗೆ ಸುತ್ತಿಕೊಂಡು ಬಾಲಕಿಯೋರ್ವಳು ಮೃತ ಪಟ್ಟಿದ್ದಾಳೆಂದು ಬಾನುವಾರ ಸಂಜೆ ಡಿ. 8 ರಂದು ಬುಡೋಳಿಯ ಪೆರಾಜೆ ಗ್ರಾಮದ ಮಡಲದಲ್ಲಿ ನಡೆದಿರುವುದು ವರದಿ ಪ್ರಸಾರವಾಗುತ್ತು.
ಬಂಟ್ವಾಳದ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ನಿವಾಸಿ ಕಿಶೋರ್ ಅವರ ಪುತ್ರಿ ತೀರ್ಥಶ್ರೀ ಶೇರಾ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಯಾವ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬುದು ಪೋಲಿಸರ ತನಿಕೆಯಿಂದ ಇನ್ನಷ್ಟೆ ತಿಳಿಯಬೇಕಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 ಕಾಮೆಂಟ್ಗಳು