ಇಂದು ಶಾಲಾ ಕಾಲೇಜಿಗೆ ರಜೆ ಘೋಷಣೆ
ಫೆಂಗಲ್ ಚಂಡಮಾರುತ ಹಿನ್ನಲೆ ನಿನ್ನೆಯಿಂದ ದ.ಕ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಇಂದು ಡಿ. ರಂದು ಅಂಗನವಾಡಿ, ಶಾಲಾ ಕಾಲೇಜು (ಪಿಯುಸಿ) ಗಳಿಗೆ ರಜೆ ನೀಡಿ ದ.ಕ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಚಂಡಮಾರುತದ ಎಫೆಕ್ಟ್ ರಾಜ್ಯದ್ಯಾಂತ ಕೆಲವು ಜಿಲ್ಲೆಗಳು ಜಲಾವೃಗೊಳ್ಳುವ ಸಾದ್ಯತೆ ಇದೆ ಎನ್ನಲಾಗುತ್ತಿದೆ. ನಿನ್ನೆ ಇಡೀ ದಿನ ಮೋಡ ಕವಿದ ವಾತಾವರಣವಿದ್ದು ಮದ್ಯಾಹ್ನದ ವೇಳೆ ಮಳೆ ಆರಂಭಗೊಂಡಿದೆ. ರಾತ್ರಿಯಿಡಿ ಸುರಿದ ಭಾರಿ ಮಳೆಗೆ ನದಿ ಹಳ್ಳಗಳು ತುಂಬಿ ಹರಿಯುತ್ತಿವೆ.
ಭಾರಿ ಮಳೆಗೆ ಸಿಡಿಲಿನ ಅಬ್ಬರವೂ ಕೆಲವು ಕಡೆ ಜೋರಾಗಿದೆ, ನಿನ್ನೆ ಡಿ.2 ರಂದು
ಸಂಜೆ ಕೆಯ್ಯೂರಿನಲ್ಲಿ ವ್ಯಕ್ತಿಯೋರ್ವರಿಗೆ ಸಿಡಿಲು ಬಡಿದಿದ್ದು ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟಿದ್ದರೆಂದು ತಿಳಿದುಬಂದಿದೆ.
0 ಕಾಮೆಂಟ್‌ಗಳು