ಶಾಲಾ ಮಕ್ಕಳಿಗೆ ಮದ್ಯಾಹ್ನ ಬಿಸಿಯೂಟ ಯೋಜನೆ ತಂದ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಇನ್ನು ನೆನಪು ಮಾತ್ರ


 ಕರ್ನಾಟಕ ರಾಜಕೀಯದ ಭಗಿರಥ, ಕರ್ನಾಟಕದ ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್​ಎಂ ಕೃಷ್ಣ ಅವರು ನಿಧನರಾಗಿದ್ದಾರೆ. ಎಸ್​ಎಂ ಕೃಷ್ಣ ಕರ್ನಾಟಕದ ಅತ್ಯಂತ ಪ್ರಭಾವಿ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಮುಖ್ಯಮಂತ್ರಿಯಾಗಿದ್ದಾ ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ಯೋಜನೆಯನ್ನು ತಂದು ಯಶಸ್ವಿಯಾದರು.


ಅವರು ತಂದ ಅಕ್ಷರದಾಸೋಹ ಯೋಜನೆಯಿಂದ ಶಾಲಾ ಮಕ್ಕಳು ಅಂದಿನಿಂದ  ಮದ್ಯಾಹ್ನ ಬಿಸಿಯೂಟ ಸವಿಯುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳು ಉಪವಾಸ ಕುಳಿತು ಪಾಠ ಕೇಳಬಾರದು, ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂಬ ದೂರಲೋಚನೆ ಮುಖ್ಯ ಅಂಗವಾಗಿ ಎಲ್ಲ ಮಕ್ಕಳಿಗೂ ಶಾಲೆಯಲ್ಲೆ ಮದ್ಯಾಹ್ನ ಊಟ ತಯಾರಿಸಿಕೊಡುವಂತಹ ಆತ್ಯಂತ ಅದ್ಬತ ಯೋಜನೆಯನ್ನು ತಂದ ಏಕೈಕ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ರವರು ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು