ಬೈಕ್ ಮತ್ತು ಟೆಂಪೊ ನಡುವೆ ಅಪಘಾತ ಸಂಭವಿಸಿ ವಿಟ್ಲ ಪಿಯು ಕಾಲೇಜಿನ ವಿದ್ಯಾರ್ಥಿಯೋರ್ವ ಸಾವನಪ್ಪಿರುವ ಘಟನೆ ಪರಂಗಿಪೇಟೆಯ ಅರ್ಕುಳದಲ್ಲಿ ನಡೆದಿದೆ.
ಬಿಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬೈಕ್ ಸಂಚರಿಸುತ್ತಿದ್ದು ಅರ್ಕುಳದ ಸಮೀಪ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟಿದ್ದ ಆ ಸಂದರ್ಭದಲ್ಲಿ ಟೆಂಪೊವೊಂದು ಸಂಚರಿಸುತ್ತಿದ್ದ ಕಾರಣ ಟೆಂಪೊ ಬೈಕ್ ಸವಾರನ ಮೇಲೆಯೆ ಹರಿದಿದೆ.
ಸ್ಥಳದಲ್ಲೆ ಬೈಕ್ ಸವಾರ ಮೃತ ಪಟ್ಟಿದ್ದು ಆತನನ್ನು ಬೆಳ್ತಂಗಡಿಯ ಮುಂಡೂರಿನ ಶೇಖರ್ ರವರ ಪುತ್ರ ಪ್ರವಿತ್ ಕುಮಾರ್ ಎಂದು ಗುರುತಿಸಲಾಗಿದೆ.
0 ಕಾಮೆಂಟ್‌ಗಳು