ಪ್ರಭಾವಿ ನಾಯಕರೊಬ್ಬರ ಹೆಸರು ಬಳಸಿಕೊಂಡು ಒಳ್ಳೆಯ ಕೆಲಸಗಳನ್ನು ಮಾಡಿದರೆ ಇಡೀ ಸಮಾಜವೆ ಮೆಚ್ಚುತ್ತದೆ. ಆದರೆ ಇಲ್ಲೊಬ್ಬ ಕಾಮುಕ ಗುಡ್ಡವೊಂದರಲ್ಲಿ ಹುಡುಗಿಯೊಂದಿಗೆ ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದು, ಬುದ್ದಿ ಹೇಳಿ ಕಳುಹಿಸಿಕೊಟ್ಟವರಿಗೆ ರಾಜಕೀಯದ ಪ್ರಭಾವಿ ನಾಯಕರೊಬ್ಬರ ಹೆಸರು ಬಳಸಿಕೊಂಡು ಬೆದರಿಕೆಯೊಡ್ಡಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮ್ಮನ ಮಗಳನ್ನು ಗುಡ್ಡವೊಂದಕ್ಕೆ ಕರೆ ತಂದು ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದ ಕಾಮುಕ ಮಾನ ಮರ್ಯಾದೆ ಕಳೆದುಕೊಂಡಿದ್ದಲ್ಲದೆ ರಾಜ್ಯ ರಾಜಕೀಯದಲ್ಲೆ ಸದ್ದು ಮಾಡಿರುವ ದ.ಕ ಜಿಲ್ಲೆಯ ಪ್ರಭಾವಿ ನಾಯಕರೊಬ್ಬರ ಹೆಸರು ಬಳಸಿಕೊಂಡು ಬುದ್ದಿ ಹೇಳಿದವರಿಗೆ ಧಮ್ಕಿ ಹಾಕಿದ್ದಾನೆ. ಅಲ್ಲದೆ ಪುತ್ತೂರಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲಿ ಸಿಕ್ತಿಯಾ ಹೇಳು ಅಲ್ಲಿಗೆ ಬರುತ್ತೇವೆಂದು ಬೆದರಿಕೆಯೊಡ್ಡಿದ್ದಾನೆ.
ಸಂಬಂಧದಲ್ಲಿ ಆ ಹುಡುಗಿ ತಂಗಿಯಾಬೇಕಂತೆ, ಅವಳನ್ನು ಗುಡ್ಡವೊಂದಕ್ಕೆ ಕರೆ ತಂದು ಮೈ ಮೇಲೆ ಒಂದು ತುಂಡು ಬಟ್ಟೆ ಇಲ್ಲದೆ ಬೆತ್ತಲೆಯಾಗಿ ಸಿಕ್ಕಿಬಿದ್ದ ಕಾಮುಕ ತಾನು ಮಾಡಿದ್ದು ಒಂದು ಸಾಧನೆ ಎಂಬಂತೆ ಪ್ರಭಾವಿ ನಾಯಕರ ಹೆಸರು ಹೇಳಿ ಓಡಿ ಹೋಗಿದ್ದಾನೆ.
ಹೊರ ರಾಜ್ಯದಿಂದ ಬಂದ ಮರ್ಯಾದೆಗೆಟ್ಟ ಲಂಪಟ ಇಲ್ಲಿನ ನಾಯಕರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಇಡೀ ಸಮಾಜವೆ ತಲೆ ತಗ್ಗಿಸುವ ಕೆಲಸ ಮಾಡಿದ್ದಾನೆ.
0 ಕಾಮೆಂಟ್‌ಗಳು